2020ನೇ ಇಸ್ವಿಯಲ್ಲಿ ಬಿಸಿಸಿಐನಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ನಾಯಕ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.
ಬಿಸಿಸಿಐನಿಂದ ಈ ವರ್ಷ ಜಸ್ಪ್ರೀತ್ ಬೂಮ್ರಾ 1.38 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಬಿಸಿಸಿಐ ಸಂಭಾವನೆ ಪಟ್ಟಿಯಲ್ಲಿ ಬೂಮ್ರಾ ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನೇ ಹಿಂದಿಕ್ಕಿದ್ದಾರೆ.
ಇನ್ನೊಂದು ಆಶ್ಚರ್ಯಕರ ವಿಚಾರ ಅಂದರೆ ಬಿಸಿಸಿಐನಿಂದ ಈ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ 5 ಟೀಂ ಇಂಡಿಯಾ ಆಟಗಾರರ ಪಟ್ಟಿಯಿಂದ ರೋಹಿತ್ ಶರ್ಮಾ ಹೊರಬಿದ್ದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2020ರ ಬಿಸಿಸಿಐನ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಇರಬಹುದಿತ್ತು. ಆದರೆ ಪಿತೃತ್ವ ರಜೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಕೊಹ್ಲಿ ಭಾರತಕ್ಕೆ ಹಿಂದಿರುಗಿರೋದ್ರಿಂದ ಸಂಭಾವನೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಬೂಮ್ರಾ ಬಿಸಿಸಿಐನ ಎ ಪ್ಲಸ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೂಮ್ರಾ ಈ ವರ್ಷ ಟೀಂ ಇಂಡಿಯಾ ಪರ 4 ಟೆಸ್ಟ್ ( ಬಾಕ್ಸಿಂಗ್ ಡೇ ಟೆಸ್ಟ್ನ್ನೂ ಸೇರಿಸಿ) , 9 ಏಕದಿನ ಪಂದ್ಯ ಹಾಗೂ 8 ಟಿ 20 ಪಂದ್ಯಗಳನ್ನ ಆಡಿದ್ದಾರೆ. ಇನ್ನು ಬಿಸಿಸಿಐನಿಂದ 96 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಮೂಲಕ ರವೀಂದ್ರ ಜಾಡೇಜಾ ಎ ಪ್ಲಸ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.