ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಸಾರಂಗಗಳ ಗಾಡಿಯನ್ನೇರಿ ಬರುತ್ತಾನೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈ ವರ್ಷ ಸಾಂಟಾ ಈ ಐಡಿಯಾ ಕೈಬಿಟ್ಟಿದ್ದಾನಂತೆ…!
ದುಬೈನ ಜನಪ್ರಿಯ ಪ್ರವಾಸಿ ತಾಣವಾದ ಗ್ಲೋಬಲ್ ವಿಲೇಜ್ನಲ್ಲಿ ಸಾಂಟಾ ’ಮರಳುಗಾಡಿನ ಹಡಗು’ ಏರಿಕೊಂಡು ಬರುವುದನ್ನು ಕಾಣುತ್ತಿದ್ದಾರೆ ಪ್ರವಾಸಿಗರು. ಈ ದೃಶ್ಯಾವಳಿಯ ವಿಡಿಯೋವನ್ನು ರಾಯಿಟರ್ಸ್ ಮಾಧ್ಯಮದಲ್ಲಿ ಬಿತ್ತರಿಸಲಾಗಿದೆ.
ಈ ವಿಡಿಯೋದಲ್ಲಿ ಸಾಂಟಾ ಜೊತೆಗೆ ಜನರ ಗುಂಪೊಂದು ಜಿಂಜರ್ಬ್ರೆಡ್ ಮ್ಯಾನ್ ಕಾಸ್ಟ್ಯೂಮ್ ಧರಿಸಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ನೋಡಬಹುದಾಗಿದೆ. ಒಂಟೆ ಮೇಲೆ ಕುಳಿತ ಸಾಂಟಾ ಬೆಲ್ ಬಾರಿಸುತ್ತಿರುವುದನ್ನು ಸಹ ನೋಡಬಹುದಾಗಿದೆ.