ಮಂಗಳೂರು: ಮೊಟ್ಟೆ ರೇಟು ದಿಢೀರ್ ಏರಿಕೆಯಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ವೇಳೆ ಕೇಕ್ ತಯಾರಿಕೆಯಲ್ಲಿ ಮೊಟ್ಟೆ ಬಳಕೆ ಹೆಚ್ಚಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಮೊಟ್ಟೆ ದರ ಏರಿಕೆಯಾಗುತ್ತದೆ. ಈ ಬಾರಿ ಒಂದು ಮೊಟ್ಟೆ ದರ 6 ರೂ. ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗಲಿದ್ದು, ಒಂದು ಮೊಟ್ಟೆ ದರ 7 ರೂಪಾಯಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಕೆಗೆ ಹೆಚ್ಚಾಗಿ ಮೊಟ್ಟೆ ಬಳಸಲಾಗುತ್ತದೆ. ಡಿಸೆಂಬರ್ ನಲ್ಲಿ ಸುಮಾರು 2.5 ಕೋಟಿ ಮೊಟ್ಟೆಗಳನ್ನು ಬಳಸಲಾಗುತ್ತಿದ್ದು, ಬೆಂಗಳೂರು ನಂತರ ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಮೊಟ್ಟೆ ಬಳಕೆಯಾಗುತ್ತಿದೆ. ಪ್ರತಿದಿನ ಸುಮಾರು 5 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ ಎಂದು ಹೇಳಲಾಗಿದ್ದು, ಮೊಟ್ಟೆ ದರ ಏರಿಕೆಯಿಂದ ಗ್ರಾಹಕರು ದಂಗಾಗಿದ್ದಾರೆ.