ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸುವ, ಸೌಂದರ್ಯ ಕಾಪಾಡುವ ಸಿಂಪಲ್ ಟಿಪ್ಸ್ ಗಳು ಇಲ್ಲಿವೆ ಕೇಳಿ
ಸ್ನಾನಕ್ಕೆ ಹೆಚ್ಚು ಹೊತ್ತು ತೆಗೆದುಕೊಳ್ಳದಿರಿ. ಹತ್ತು ನಿಮಿಷದೊಳಗೆ ಸ್ನಾನ ಮುಗಿಸಿ ಬನ್ನಿ. ಸ್ನಾನಕ್ಕೆ ಸುಡು ಬಿಸಿಯ ಅಥವಾ ತಣ್ಣೀರನ್ನು ಬಳಸದಿರಿ. ಉಗುರು ಬೆಚ್ಚಗಿನ ನೀರಿನ ಬಳಕೆ ಸಾಕು. ಹೆಚ್ಚು ಸೋಪು ಬಳಸುವುದೂ ಬೇಡ. ಇದು ತ್ವಚೆಯ ತೇವಾಂಶವನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು.
ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಸೋಪು ಬಳಸಿ. ಸ್ನಾನವಾದ ಬಳಿಕ ನಿಮ್ಮ ತ್ವಚೆಯನ್ನು ಒಣಗಿಸುವ ಸೋಪಿನ ಬಳಕೆ ಬೇಡ. ಇದರಿಂದ ತ್ವಚೆ ಬಿರುಕು ಬಿಟ್ಟು ತುರಿಕೆ ಸಮಸ್ಯೆ ಕಾಣಿಸಿಕೊಂಡೀತು.
ಸ್ನಾನವಾದ ಬಳಿಕ ಕೈ ಕಾಲುಗಳಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳುವುದು ಹೆಚ್ಚು ಸೂಕ್ತ. ಇದಕ್ಕಿಂತ ಉತ್ತಮವಾದ ಮಾಯಿಸ್ಚರೈಸರ್ ಬೇರೆ ಇಲ್ಲ. ಅನಿವಾರ್ಯವಾದರೆ ಉತ್ತಮ ಗುಣಮಟ್ಟದ ಕ್ರೀಮ್ ಅಥವಾ ಲೋಷನ್ ಬಳಸಿ.
ಚಳಿಗಾಲದಲ್ಲಿ ಮನೆಯಿಂದ ಹೊರಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚಲು ಮರೆಯದಿರಿ. ಇದು ಸೂರ್ಯನ ಆಲ್ಟ್ರಾವಯಲೆಟ್ ಕಿರಣಗಳು ನೇರವಾಗಿ ತ್ವಚೆಯ ಮೇಲೆ ಬೀಳುವುದನ್ನು ತಪ್ಪಿಸುತ್ತದೆ.