ಕೇಕ್ಗಳು ಕ್ರಿಸ್ಮಸ್ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಕೊಲ್ಕತ್ತಾ ಸಾಂಪ್ರದಾಯಿಕ ಕ್ರಿಸ್ಮಸ್ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ ಕ್ರಿಸ್ಮಸ್ ಕೇಕ್ಗಳಿಗೂ ವಿವಿಧ ಪಕ್ಷಗಳ ಬಣ್ಣ ಬಳಿಯಲಾಗಿದೆ.
ತೃಣಮೂಲ ಕಾಂಗ್ರೆಸ್, ಬಿಜೆಪಿ, ಸಿಪಿಎಂ ಹಾಗೂ ಕಾಂಗ್ರೆಸ್ನ ಚಿಹ್ನೆಗಳನ್ನ ಕೇಕ್ಗಳ ಮೇಲೆ ಬಿಡಿಸಲಾಗಿದೆ.
ಕ್ರಿಸ್ಮಸ್ ಹಬ್ಬ ಸಮೀಪಿಸಿತು ಅಂದರೆ ಸಾಕು ಕೊಲ್ಕತ್ತಾದ ಎಲ್ಲಾ ಬೇಕರಿಗಳಲ್ಲಿ ಕೇಕ್ಗಳ ರಾಶಿಯೇ ಇರುತ್ತೆ. ಇದನ್ನ ಸ್ಥಳೀಯ ಭಾಷೆಯಲ್ಲಿ ಬೋರೋ ದಿನ್ ಎಂದು ಕರೆಯಲಾಗುತ್ತೆ. ಡಿಸೆಂಬರ್ ತಿಂಗಳಲ್ಲಿ ನಗರದ ತುಂಬೆಲ್ಲ ಕ್ರಿಸ್ಮಸ್ ಗಿಡಗಳು ಹಾಗೂ ದೀಪಾಲಂಕಾರದಿಂದ ಸಿಂಗರಿಸಲಾಗುತ್ತೆ.