ಸಾಮಾನ್ಯವಾಗಿ 80 ವರ್ಷದ ವೃದ್ಧರು ಅಂದರೆ ಊರುಗೋಲು, ಆರಾಮ ಖುರ್ಚಿ, ಔಷಧಿಗಳು ಈ ರೀತಿಯ ಕೆಲ ವಸ್ತುಗಳನ್ನ ಹೊಂದಿರುತ್ತಾರೆ. ಆದರೆ ಈ ಮಾತು ಎಲ್ಲರ ವಿಚಾರದಲ್ಲೂ ನಿಜ ಆಗಲೇಬೇಕು ಅಂತಿಲ್ಲ.
ಆಸ್ಟ್ರೇಲಿಯಾ ರಾಜಧಾನಿ ವಿಯೆನ್ನಾ ನಿವಾಸಿ ಒಟ್ಟೋಕಾರ್ ಜೆ, ಎಂಬವರು ತಮ್ಮ 80ನೇ ವಯಸ್ಸಿನ ವಿಶೇಷವಾಗಿ 80ನೇ ಪೊರ್ಶೇ ಕಾರನ್ನ ಮನೆಗೆ ತರುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ನೀಲಿ ಬಣ್ಣದ ಬೋಕ್ಸ್ಟರ್ ಸ್ಪೈಡರ್ ಪೊರ್ಶೆ ಕಾರು ಈ 80ರ ವೃದ್ಧನ 80ನೇ ಪೊರ್ಶೆ ಕಾರಾಗಿದೆ. ಯಾರಾದರೂ ಪೋರ್ಶೆ ಅಭಿಮಾನಿಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡೋಕೆ ಹೋದರೆ ಈ ವ್ಯಕ್ತಿಯ ಹೆಸರು ಅಗ್ರಗಣ್ಯ ಸಾಲಿನಲ್ಲಿ ಕಾಣಸಿಗಲಿದೆ.
ಸುಮಾರು 50 ವರ್ಷಗಳ ಹಿಂದೆ ಒಟ್ಟೊಕಾರ್ಗೆ ಈ ಪೊರ್ಶೆ ಕಾರುಗಳ ಮೇಲೆ ವ್ಯಾಮೋಹ ಶುರುವಾಗಿದ್ದಂತೆ. ಇವರ ಪಕ್ಕವೇ ಅತ್ಯಂತ ವೇಗದಲ್ಲಿ ಪೊರ್ಶೆ ಕಾರೊಂದು ಹಾದು ಹೋಗಿದ್ದನ್ನ ನೋಡಿದ ಒಟ್ಟೋಗೆ ತಾನು ಕೂಡ ಪೊರ್ಶೆ ಕಾರಿನ ಮಾಲೀಕನಾಗಬೇಕೆಂಬ ಹಂಬಲವನ್ನ ಹುಟ್ಟುಹಾಕಿತಂತೆ. ಅಂದಿನಿಂದ ಹಣ ಹೊಂದಿಸೋಕೆ ಆರಂಭಿಸಿದ ಒಟ್ಟೊ ಇಲ್ಲಿಯವರೆಗೆ 80 ಪೊರ್ಶೆ ಕಾರನ್ನ ಖರೀದಿ ಮಾಡಿದ್ದಾರೆ.