ಬ್ರಿಟನ್ನಲ್ಲಿ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ರೂಪಾಂತರಿತ ಕೊರೊನಾ ವೈರಸ್ ಭಾರತದಲ್ಲಿ ಇದುವರೆಗೆ ಕಂಡು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರೂಪಾಂತರಿತ ಕೊರೊನಾ ವೈರಸ್ ಹೆಚ್ಚು ಆಕ್ರಮಣಕಾರಿಯಾಗಿದ್ದು 70 ಪ್ರತಿಶತ ಅಧಿಕ ಪ್ರಮಾಣದಲ್ಲಿ ಇದು ಹರಡುತ್ತೆ. ಬ್ರಿಟನ್ನಲ್ಲಿ ಈ ವೈರಸ್ ಅತಿಯಾಗಿ ಹರಡುತ್ತಿದ್ದು ವಿಶ್ವದ ಜನತೆಯನ್ನ ಕಳವಳಕ್ಕೆ ದೂಡಿದೆ.
ಅಲ್ಲದೇ ಈ ರೂಪಾಂತರಗೊಂಡ ವೈರಸ್ ವಿರುದ್ಧ ಕೊರೊನಾ ಲಸಿಕೆ ಪರಿಣಾಮಕಾರಿಯಾಗದೇ ಇದ್ದರೆ ಹೇಗೆ ಎಂಬ ಆತಂಕ ಹಲವರಲ್ಲಿದೆ.
ಬ್ರಿಟನ್ ನಲ್ಲಿ ಕಂಡುಬಂದ ಮ್ಯೂಟೆಟೆಡ್ ಕೊರೊನಾ ವೈರಸ್ ಭಾರತದಲ್ಲಿ ಇದುವರೆಗೆ ಕಂಡುಬಂದಿಲ್ಲ ಅಂತಾ ಸರ್ಕಾರಿ ಎನ್ಐಟಿಐ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.