ಹರ್ಭಜನ್ ಸಿಂಗ್ ಹರಿದು ಹೋದ ಚಪ್ಪಲಿಯ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಗಲ್ಲಿ ಕ್ರಿಕೆಟ್ನಲ್ಲಿ ಎರಡು ರನ್ಗಾಗಿ ಓಡುವ ವೇಳೆ ಚಪ್ಪಲಿ ಸ್ಥಿತಿ ಹೀಗೆ ಆಗಿರುತ್ತೆ ಎಂದು ಬರೆದುಕೊಂಡಿದೆ.
ಈ ಪೋಸ್ಟ್ ಮೂಲಕ ಗಲ್ಲಿ ಕ್ರಿಕೆಟ್ನ್ನು ಮೆಲಕು ಹಾಕಿರುವ ಬಜ್ಜಿ ಈ ಪೋಸ್ಟ್ಗೆ ಯುವರಾಜ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ರನ್ನ ಟ್ಯಾಗ್ ಮಾಡಿದ್ದಾರೆ.
ಹರ್ಭಜನ್ ಸಿಂಗ್ರ ಈ ಟ್ವೀಟ್ ನೋಡಿದ ಟ್ವೀಟಿಗರು ತಮ್ಮ ಗಲ್ಲಿ ಕ್ರಿಕೆಟ್ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಕೆಲವರು ಚಪ್ಪಲಿ ಹೀಗೆ ಆಗುತ್ತೆ ಎಂದೇ ನಾವು ಬೌಂಡರಿಗಳನ್ನ ಬಾರಿಸುತ್ತಿದ್ದೆವು ಅಂತಾ ಹೇಳಿದ್ರೆ ಇನ್ನು ಕೆಲವರು ಈ ಹರಿದು ಹೋದ ಚಪ್ಪಲಿಯನ್ನ ನಾವು ಟೆಬಲ್ ಟೆನ್ನಿಸ್ ಬ್ಯಾಟ್ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದೆವು ಅಂತಾ ಬರೆದುಕೊಂಡಿದ್ದಾರೆ . ಸದ್ಯ ಈ ಟ್ವೀಟ್ನ್ನ ಹರ್ಭಜನ್ ಸಿಂಗ್ ಡಿಲೀಟ್ ಮಾಡಿದ್ದಾರೆ.