ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಇತ್ತೀಚೆಗೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಫನ್ನಿ ಪಜಲ್ ಒಂದನ್ನು ಶೇರ್ ಮಾಡಿಕೊಂಡಿದೆ. ಈ ಹಿಂದೆಯೂ ಸಹ ಇದೇ ಸಿಐಎ ತನ್ನ ಟ್ವಿಟರ್ ಫಾಲೋವರ್‌ಗಳಿಗೆ ಬ್ರೇನ್ ಟೀಸರ್‌ಗಳು ಹಾಗೂ ಪಜಲ್‌ಗಳನ್ನು ಕೊಡುತ್ತಿತ್ತು.
ಇದೀಗ ಚಳಿಗಾಲದ ರಾತ್ರಿಯೊಂದರ ವೇಳೆ ಊರೊಂದರ ಎರಡು ಒಂದೇ ಥರದ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಸಿಐಎ, ಈ ಚಿತ್ರಗಳಲ್ಲಿರುವ ಅತ್ಯಂತ ಸಣ್ಣ ವ್ಯತ್ಯಾಸಗಳನ್ನು ಪತ್ತೆ ಮಾಡಲು ತನ್ನ ಹಿಂಬಾಲಕರಿಗೆ ಸೂಚಿಸಿದೆ.
“ಈ ಪಜಲ್ ಅನ್ನು ಹೇಗೆ ಬಿಡಿಸಬೇಕೆಂದು ನಿಮಗೆ ಗೊತ್ತೇ ಇದೆ. ಅದೆಷ್ಟು ವ್ಯತ್ಯಾಸಗಳನ್ನು ನೀವು ಪತ್ತೆ ಮಾಡಬಲ್ಲಿರಿ ನೋಡೋಣ” ಎಂದು ಸಿಐಎ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೊಂಡಿದೆ.