ನೈಸರ್ಗಿಕ ಬಣ್ಣಗಳನ್ನ ಬಳಸಿ ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನ ರಚಿಸುವ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಸಿಂಗ್ 62.72 ಚದರ ಮೀಟರ್ ಅಳತೆಯಲ್ಲಿ ನೈಸರ್ಗಿಕ ಬಣ್ಣಗಳನ್ನ ಮಾತ್ರ ಬಳಸಿ ಈ ಕಲಾಕೃತಿಯನ್ನ ರಚಿಸಿದ್ದಾರೆ. ಇದೊಂದು ಮೋಕ್ಷದ ಮರವಾಗಿದ್ದು ಈ ಸಾಧನೆಗಾಗಿ ನೇಹಾ ಹೆಸರನ್ನ ವಿಶ್ವ ದಾಖಲೆಯಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಹರಿ ಪ್ರತಾಪ್ ಶಾಹಿ ಹೇಳಿದ್ದಾರೆ.
ರಾಶ್ರಾ ತಹಸೀಲ್ ನಿವಾಸಿ ನೇಹಾ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ವರ್ಣಚಿತ್ರಕ್ಕೆ ಬಣ್ಣವನ್ನ ತುಂಬಲು ನೇಹಾ ಮಸಾಲೆ ಪದಾರ್ಥಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ನವೆಂಬರ್ 18, 2020 ರಂದು ನೇಹಾ ಸಿಂಗ್ ಈ ದಾಖಲೆಯನ್ನು ಸಾಧಿಸಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.