ಕೊರೊನಾ ವೈರಸ್ನಿಂದಾಗಿ ಲೈವ್ ಇವೆಂಟ್ಗಳನ್ನ ಮಿಸ್ ಮಾಡಿಕೊಳ್ಳುತ್ತಿರುವ ಸಂಗೀತ ಅಭಿಮಾನಿಗಳಿಗೆ ವರ್ಚುವಲ್ ಸಂಗೀತ ಕಚೇರಿಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮಹತ್ವದ ಪಾತ್ರವಲ್ಲಿ ನಿರ್ವಹಿಸುತ್ತಿವೆ. ಆದರೆ ಬ್ರಿಟನ್ನಲ್ಲಿ ವರ್ಚುವಲ್ ಸಂಗೀತ ಪ್ರದರ್ಶನಕ್ಕೆ ತೆರಿಗೆ ವಿಧಿಸುವ ಬಗ್ಗೆ ಯೋಚಿಸಲಾಗುತ್ತಿದ್ದು ಕಲಾವಿದರಿಂದ ವಿರೋಧ ವ್ಯಕ್ತವಾಗಿದೆ .
ಹೊಸ ತೆರಿಗೆ ನಿಯಮದ ಪ್ರಕಾರ 50 ಸಾವಿರ ಪೌಂಡ್ ಅಥವಾ 49,76,760.05 ರೂಪಾಯಿಗಳವೆರೆಗ ಸಂಪಾದಿಸುವ ವರ್ಚುವಲ್ ಪ್ರದರ್ಶನಗಳು ತಮ್ಮ ಆದಾಯದ 8 ಪ್ರತಿಶತವನ್ನ ಸಾಮೂಹಿಕವಾಗಿ ಪಾವತಿ ಮಾಡಬೇಕಾಗುತ್ತೆ. ಆದರೆ 4,47,90,840.44 ರೂಪಾಯಿಗಳವರೆಗೆ ಸಂಪಾದಿಸುವವರು ತಮ್ಮ ಆದಾಯದಲ್ಲಿ 17 ಪ್ರತಿಶತವನ್ನ ಹಿಂದಿರುಗಿಸಬೇಕಾಗುತ್ತೆ.
ಆದರೆ ಬ್ರಿಟೀಷ್ ಸಂಗೀತ ಕ್ಷೇತ್ರದ ಅನೇಕ ಕಲಾವಿದರು ಈ ಪ್ರಾಯೋಗಿಕ ಸುಂಕ ವ್ಯವಸ್ಥೆಯನ್ನ ಟೀಕೆ ಮಾಡಿದ್ದಾರೆ. ಈ ಪ್ರಸ್ತಾವಿತ ವ್ಯವಸ್ಥೆಯು ಲೈವ್ ಸ್ಟ್ರೀಮಿಂಗ್ ಪದ್ಧತಿಯನ್ನ ದುರ್ಬಲಗೊಳಿಸುತ್ತೆ. ಇದರಿಂದ ಸಣ್ಣ ಕಲಾವಿದರಿಗೆ ಸಮಸ್ಯೆ ಉಂಟಾಗುತ್ತೆ ಎಂದು ಹೇಳಿದ್ದಾರೆ.