ದಯಾಮಯಿ ಆಗಿರಬೇಕು ಅಂದರೆ ಜಾಸ್ತಿ ಬೆಲೆ ತೆರಬೇಕಾದದ್ದು ಏನಿಲ್ಲ. ಆದರೆ ಶುದ್ಧ ಮನಸ್ಸು ಇರೋದು ತುಂಬಾನೇ ಮುಖ್ಯ. ಈ ಮಾತಿಗೆ ಸಾಕ್ಷಿಯೆಂಬಂತೆ ಮಣಿಪುರದ ಮಹಿಳಾ ಪೊಲೀಸ್ ತಮ್ಮ ದಯಾಗುಣದ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.
ಮಣಿಪುರ ಸ್ಟೇಷನ್ ಇನ್ಚಾರ್ಜ್ ಏಕ್ತಾ ಸಿಂಗ್ ತಮ್ಮ ಕರ್ತವ್ಯದ ಜೊತೆ ಜೊತೆಗೆ ವೃದ್ಧ ಮಹಿಳೆಗೆ ಸಹಾಯ ಹಸ್ತ ಚಾಚುವ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಮಣಿಪುರದಲ್ಲಿ ಸಿಕ್ಕಾಪಟ್ಟೆ ಚಳಿಯ ವಾತಾವರಣವಿದೆ. ಕಡು ಚಳಿಯಲ್ಲೂ ಮಹಿಳೆಯೊಬ್ಬರು ಬರಿಗಾಲಲ್ಲಿ ನಡೆಯುತ್ತಿರೋದನ್ನ ಏಕ್ತಾ ಸಿಂಗ್ ಗಮನಿಸಿದ್ದಾರೆ.
ಕೂಡಲೇ ಆ ವೃದ್ಧೆಗಾಗಿ ಶೂ ಖರೀದಿಸಿದ ಪೊಲೀಸ್ ಅಧಿಕಾರಿಣಿ ಸ್ವತಃ ತಮ್ಮ ಕೈಯಾರೇ ವೃದ್ಧೆಯ ಕಾಲಿಗೆ ಅದನ್ನ ತೊಡಿಸಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮಹಿಳಾ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಸಲಾಂ ಎಂದಿದ್ದಾರೆ.