ಶಿಕ್ಷಣ ಲೋಕದಲ್ಲಿ ತನ್ನದೇ ಆದ ಬೋಧನಾ ಕ್ರಮವನ್ನ ಅಳವಡಿಸಿಕೊಂಡಿದ್ದ ಭಾರತೀಯ ಶಿಕ್ಷಕ ರಂಜಿತ್ ಸಿಂಹ್ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.
ಬಹುಮಾನ ರೂಪದಲ್ಲಿ ಬಂದ 7.4 ಕೋಟಿ ರೂಪಾಯಿಗಳಲ್ಲಿ ತನ್ನ ಒಂಬತ್ತು ಸಹವರ್ತಿಗಳ ಜೊತೆ ಹಂಚಿಕೊಳ್ಳುವ ಮೂಲಕ ಮಹಾರಾಷ್ಟ್ರದ ಈ ಶಿಕ್ಷಕ ವಿಶ್ವಕ್ಕೇ ಮಾದರಿ ಎನಿಸಿಕೊಂಡಿದ್ದಾರೆ.
ಸಮಾಜವನ್ನ ತಿದ್ದಿ ತೀಡುವ ಸಾಮರ್ಥ್ಯ ಇರೋದು ಕೇವಲ ಶಿಕ್ಷಕರ ಕೈಯಲ್ಲಿ ಮಾತ್ರ. ಶಿಕ್ಷಕರ ಪರಿಶ್ರಮದ ಬಗ್ಗೆ ಗೌರವವನ್ನ ಹೊಂದಿದ್ದ ಶಿಕ್ಷಕ ರಂಜಿತ್ ತನ್ನ ಬಹುಮಾನ ಮೊತ್ತದ ಶೇಕಡಾ 50 ಪ್ರತಿಶತವನ್ನ 10 ಮಂದಿ ಫೈನಲಿಸ್ಟ್ಗೆ ಹಂಚುವ ಮೂಲಕ ಇದೀಗ ದೇಶದ ಮನೆಮಾತಾಗಿದ್ದಾರೆ.
ಹಿರಿಯ ನಟ ಹಾಗೂ ಬರಹಗಾರ ಸ್ಪೀಫನ್ ಫ್ರೈ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನ ಘೋಷಣೆ ಮಾಡಿದ್ದ ವೇಳೆ ರಂಜಿತ್ ಖುಷಿ ಪಟ್ಟ ಬಗೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಷಕರ ಮಧ್ಯೆ ಕುಳಿತಿದ್ದ ರಂಜಿತ್ ಸಂತೋಷದಿಂದ ಕೂಗಿದರು. ಕೂಡಲೇ ಶಿಕ್ಷಕರ ತಾಯಿ ಮಗನನ್ನ ಅಪ್ಪಿಕೊಂಡರು. ಬಳಿಕ ರಂಜಿತ್ ತನ್ನ ತಂದೆಯನ್ನೂ ಬರಸೆಳೆದು ಅಪ್ಪಿಕೊಂಡಿದ್ದಾರೆ. ವಿಡಿಯೋದಲ್ಲಿ ಇನ್ನೊಂದು ತಾಯಿ ಹಾಗೂ ಮಗುವನ್ನೂ ನೋಡಬಹುದಾಗಿದೆ.