ಕರ್ನಾಟಕ ರಾಷ್ಟ್ರೀಯ ಅರಣ್ಯವೊಂದರಲ್ಲಿದ್ದ ಒಂದೇ ರಸ್ತೆಯಲ್ಲಿ ಬರೋಬ್ಬರಿ 7 ದಿನಗಳ ಕಾಲ ಕಾದ ಯುವಕ ಕೊನೆಗೂ ಬ್ಲಾಕ್ ಪ್ಯಾಂಥರ್ ಫೋಟೋ ಕ್ಲಿಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರದ 18 ವರ್ಷದ ಧ್ರುವ್ ಪಾಟೀಲ್ ವನ್ಯಜೀವಿಗಳ ಬಗ್ಗೆ ವಿಶೇಷ ಒಲವನ್ನ ಹೊಂದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಲ್ಲಿ ಬ್ಲಾಕ್ ಪ್ಯಾಂಥರ್ ಸೆರೆ ಹಿಡಿಯಲು ಇಚ್ಚಿಸಿದ್ದ ಧ್ರುವ್ ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ವಾರಗಟ್ಟಲೇ ಕಾಲ ಕಳೆದಿದ್ದಾರೆ.
ಧ್ರುವ್ ತಮ್ಮ ಕ್ಯಾಮರಾಗಳೊಂದಿಗೆ ಭೇಟಿ ನೀಡಿದ್ದು ಕೈಮರ ಎಂಬ ಒಂದೇ ರಸ್ತೆಯಲ್ಲಿ ಬರೋಬ್ಬರಿ 9 ಸಾವಿರ ನಿಮಿಷಗಳನ್ನ ಕಳೆದಿದ್ದಾರೆ. ಅಂತಿಮವಾಗಿ ಬ್ಲಾಕ್ ಪ್ಯಾಂಥರ್ ಫೋಟೋ ಕ್ಲಿಕ್ಕಿಸಿದ್ದಾರೆ. ಧ್ರುವ್ ಕ್ಯಾಮರಾ ಕಣ್ಣಲ್ಲಿ ಪ್ರಾಣಿಗಳನ್ನ ಸೆರೆ ಹಿಡಿಯೋದು ಮಾತ್ರವಲ್ಲದೇ ಮೈಸೂರು ಮೃಗಾಲಯದಲ್ಲಿ ಅನೇಕ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಲ್ಲದೇ ಅನೇಕ ಪಕ್ಷಿಗಳನ್ನ ನೋಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಧ್ರುವ್ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ರ ಕಿರಿಯ ಪುತ್ರರಾಗಿದ್ದಾರೆ.