ದುರುದ್ದೇಶಪೂರಿತ ಹಾಗೂ ಹಾನಿಕಾರಕ ಚಟುವಟಿಕೆಗಳನ್ನ ನಡೆಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫ್ರೊಫೈಲ್ಗಳನ್ನ ಸೃಷ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರ್ತಿದೆ ಎಂದು ಹೊಸ ವರದಿಯೊಂದು ಹೇಳಿದೆ.
ತಮ್ಮ ಗುರುತನ್ನ ಮರೆಮಾಚಬಯಸುವ ಭಾರತೀಯ ಬಳಕೆದಾರರು ಫೇಸ್ಬುಕ್ನಲ್ಲಿ ಶೇ. 76, ಯುಟ್ಯೂಬ್ನಲ್ಲಿ ಶೇಕಡ 60 , ಇನ್ಸ್ಟಾಗ್ರಾಂನಲ್ಲಿ 47 ಶೇಕಡ, ಹಾಗೂ ಟ್ವಿಟರ್ನಲ್ಲಿ 28 ಶೇಕಡದಷ್ಟರ ಮಟ್ಟಿಗೆ ನಕಲಿ ಖಾತೆಗಳನ್ನ ಸೃಷ್ಟಿಸಿದ್ದಾರೆ ಎಂದು ಜಾಗತಿಕ ಸೈಬರ್ ಸೆಕ್ಯೂರಿಟಿ ಕಂಪನಿ ಕ್ಯಾಸ್ಪಸ್ರ್ಕಿ ಆಘಾತಕಾರಿ ಮಾಹಿತಿಯನ್ನ ನೀಡಿದೆ.
ಸಮೀಕ್ಷೆಯ ಪ್ರಕಾರ, ಈ ನಕಲಿ ಖಾತೆಯನ್ನ ಹೊಂದಿರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ಪ್ರತಿಷ್ಠೆಗೆ ಯಾವುದೇ ಧಕ್ಕೆಯಾಗಬಾರದೆಂಬ ಕಾರಣಕ್ಕೆ ನಕಲಿ ಪ್ರೊಫೈಲ್ ಸೃಷ್ಟಿ ಮಾಡಿ, ಅದರಲ್ಲಿ ತಮ್ಮ ವಾಕ್ ಸ್ವಾತಂತ್ರ್ಯವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಶೇಕಡ 53 ರಷ್ಟು ಮಂದಿ ತಮ್ಮ ಸ್ನೇಹಿತರ ಜೊತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆರೆಯಲು ಆಸಕ್ತಿ ಇಲ್ಲದ ಕಾರಣ ರಹಸ್ಯ ಕಾಪಾಡಲು ನಕಲಿ ಖಾತೆ ಹೊಂದಿದ್ದಾರೆ ಎನ್ನಲಾಗಿದೆ.