ಹಿಮಾಚಲ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಪತ್ತೆ..! 14-12-2020 6:07PM IST / No Comments / Posted In: Latest News, India ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿರುವ ಮೇಕೆ ಜಾತಿಗೆ ಸೇರಿದ ಸೆರೋ ಪ್ರಾಣಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇದೇ ಮೊದಲು ಸ್ಪಿಟಿ ಕಣಿವೆಯಲ್ಲಿ ಈ ಅಪರೂಪದ ಪ್ರಾಣಿ ಕಂಡು ಬಂದಿದೆ. ಈ ಹಿಂದೆ ಕುಲು ಜಿಲ್ಲೆಯ ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನದಲ್ಲಿ 2018ರಲ್ಲಿ ಹಿಮಾಲಯನ್ ಸೆರೋ ಕಂಡು ಬಂದಿತ್ತು. ಆ ಸಮಯದಲ್ಲಿ ಉದ್ಯಾನವನದ ಅಧಿಕಾರಿಗಳು ಹಾಕಿದ ಕ್ಯಾಮರಾ ಬಲೆಗೆ ಈ ಪ್ರಾಣಿ ಸಿಕ್ಕಿಬಿದ್ದಿತ್ತು. ಸ್ಪಿಟಿಯ ಹರ್ಲಿಂಗ್ ಪ್ರದೇಶದಲ್ಲಿ ಹಿಮಾಲಯನ್ ಸೆರೋ ಕಾಣಸಿಕ್ಕಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಅರ್ಚನಾ ಶರ್ಮಾ ಮಾಹಿತಿ ನೀಡಿದ್ದಾರೆ. Threatned soecies- Himalayan Serow sighted in Hurling village of Spiti in Lahaul-Spiti district. pic.twitter.com/CiPoWl14rU — anand bodh (@anandbodhTOI) December 12, 2020