ಜರ್ಮನಿಯ ಡುಯೆಸೆಲ್ಡಾರ್ಫ್ ವಿಮಾನ ನಿಲ್ದಾಣದಲ್ಲಿ ಉದ್ಯಮಿ ಮರೆತುಹೋಗಿದ್ದ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ವರ್ಣಚಿತ್ರವನ್ನ ಅಲ್ಲೇ ಸಮೀಪದಲ್ಲಿ ಕಸದಬುಟ್ಟಿಯಲ್ಲಿ ಪತ್ತೆ ಹಚ್ಚಲಾಗಿದೆ.
ನವೆಂಬರ್ 27ರಂದು ಜರ್ಮನಿಯ ಡಸಲ್ಡಾರ್ಫ್ನಿಂದ ಟೆಲ್ ಅವೀವ್ಗೆ ವಿಮಾನದಲ್ಲಿ ಹೊರಟಿದ್ದ ಉದ್ಯಮಿಯೊಬ್ಬರು ಆಕಸ್ಮಿಕವಾಗಿ ಚೆಕ್ ಇನ್ ಕೌಂಟರ್ನಲ್ಲಿ ಚಿತ್ರಕಲೆಯನ್ನ ಬಿಟ್ಟು ಹೋಗಿದ್ದರು.
ಇಸ್ರೆಲ್ನಲ್ಲಿ ವಿಮಾನ ಇಳಿಯುತ್ತಿದ್ದ ವೇಳೆ ತಾವು ಚಿತ್ರಕಲೆಯನ್ನ ಚೆಕ್ ಇನ್ನಲ್ಲೇ ಬಿಟ್ಟಿದ್ದು ಗಮನಕ್ಕೆ ಬಂದಿದೆ. ಕೂಡಲೇ ಡೆಸೆಲ್ಡಾರ್ಫ್ ಪೊಲೀಸರನ್ನ ಸಂಪರ್ಕಿಸಿದ್ದಾರೆ. ಆದರೂ ಪೊಲೀಸರಿಗೆ ಅದೇ ಕೂಡಲೇ ವರ್ಣಚಿತ್ರ ಸಿಕ್ಕಿರಲಿಲ್ಲ. ಆದರೆ ಹೆಚ್ಚಿನ ತನಿಖೆಯಲ್ಲಿ ವರ್ಣಚಿತ್ರಕಲೆಯು ಮರು ಬಳಕೆ ಮಾಡುವ ವಿಭಾಗದ ಕಸದ ತೊಟ್ಟಿಯಲ್ಲಿ ಸೇರಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.