ವೈರಸ್, ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು ಸ್ಯಾನಿಟೈಸರ್ ಬಳಸುತ್ತಾರೆ. ಇದರಿಂದ ಕೈಯಲ್ಲಿರುವ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವ ಮೊದಲೆ ಸಾಯುತ್ತವೆ. ಆದರೆ ಈ ಸ್ಯಾನಿಟೈಸರ್ ಬಳಸಿ ಮಗುವಿನ ಕೈಗಳನ್ನು ಸ್ವಚ್ಚಗೊಳಿಸಬಹುದೇ ಎಂಬುದನ್ನು ತಿಳಿದುಕೊಳ್ಳಿ.
ಮಗುವಿನ ಕೈಗಳನ್ನು ಸೋಪ್ ಮತ್ತು ನೀರನ್ನು ಬಳಸಿ ಸ್ವಚ್ಚಗೊಳಿಸುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಮಗುವಿಗೆ ಸ್ಯಾನಿಟೈಸರ್ ಬಳಸಲು ವೈದ್ಯರು ಶಿಫಾರಸ್ಸು ಮಾಡುವುದಿಲ್ಲ. ಯಾಕೆಂದರೆ ಅದು ಮಗುವಿನ ಹೊಟ್ಟೆಗೆ ಹೋದರೆ ಅದರಿಂದ ಮಗುವಿಗೆ ಹಾನಿಯಾಗುವ ಸಂಭವವಿದೆ ಎನ್ನುತ್ತಾರೆ. ಅದರಲ್ಲೂ ಸ್ಪ್ರೇ ಸ್ಯಾನಿಟೈಸರ್ ಬಳಸಲೇಬಾರದು. ಇದು ಮಗುವಿನ ಕಣ್ಣಿಗೆ ಹಾನಿಮಾಡುತ್ತದೆ ಎಂದು ತಿಳಿಸುತ್ತಾರೆ.
ಹಾಗೇ ಒಂದು ವೇಳೆ ಮಗುವಿಗೆ ಸ್ಯಾನಿಟೈಸರ್ ಬಳಸುವುದಾದರೆ ಆಲ್ಕೋಹಾಲ್ ಮುಕ್ತ ಸ್ಯಾನಿಟೈಸರ್ ಬಳಸುವುದು ಉತ್ತಮ. ಅದರಲ್ಲೂ ದ್ರವ ರೂಪದ ಸ್ಯಾನಿಟೈಸರ್ ಗಿಂತ ಜೆಲ್ ನ್ನು ಬಳಸಿ. ಅಲ್ಲದೇ ಸ್ಯಾನಿಟೈಸರ್ ಬಳಸಿದ ತಕ್ಷಣ ಸೋಪ್ ನಿಂದ ಮಗುವಿನ ಕೈಗಳನ್ನು ವಾಶ್ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.