ಬಾಲಿವುಡ್ನ ಖ್ಯಾತ ಸಿನಿಮಾಗಳಲ್ಲಿ ಒಂದಾದ ‘ದಿ ಡರ್ಟಿ ಪಿಕ್ಚರ್’ನಲ್ಲಿ ನಟಿಸಿದ್ದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿ ಬಾಗಿಲು ತೆರೆದಾಗ 33 ವರ್ಷದ ನಟಿಯ ಶವ ಪತ್ತೆಯಾಗಿದೆ. ಸಿತಾರ್ ವಾದಕ ದಿವಂಗತ ನಿಖಿಲ್ ಬಂಡ್ಯೋಪಾಧ್ಯಾಯ ಪುತ್ರಿಯಾಗಿದ್ದ ಆರ್ಯ ಎಲ್ಎಸ್ಡಿ : ‘ಲವ್ ಸೆಕ್ಸ್ ಓರ್ ದೋಖಾ'(2010), ‘ದಿ ಡರ್ಟಿ ಪಿಕ್ಚರ್’(2011)ನಲ್ಲಿ ನಟಿಸಿದ್ದರು. ಬಾಲಿವುಡ್ನ ಹಲವಾರು ಚಿತ್ರಗಳಲ್ಲೂ ನಟಿ ಆರ್ಯ ನಟಿಸಿದ್ದಾರೆ.
ಮುಂಬೈನಲ್ಲಿ ಮಾಡಲಿಂಗ್ ಕೆಲಸ ಮಾಡುತ್ತಿದ್ದ ನಟಿ ಬೆಳಗ್ಗೆ ಫೋನ್ ಕಾಲ್ಗಳನ್ನ ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕೊಠಡಿಯ ಬಾಗಿಲನ್ನ ಒಡೆದಿದ್ದಾರೆ.
ಸದ್ಯ ನಟಿಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವಿಧಿವಿಜ್ಞಾನ ತಂಡವು ಆಕೆಯ ರೂಂನಲ್ಲಿದ್ದ ವಸ್ತುಗಳನ್ನ ಸಂಗ್ರಹಿಸಿದೆ.