ಕ್ರಿಸ್ಮಸ್ ಹಬ್ಬ ಬಂತು ಅಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್. ಉಡುಗೊರೆಗಳನ್ನ ನೀಡೋದಕ್ಕೆ ಹೆಸರುವಾಸಿಯಾಗಿರೋ ಸಾಂತಾ ಕ್ಲಾಸ್ ಕಂಡರೆ ಮಕ್ಕಳಿಗಂತೂ ಎಲ್ಲಿಲ್ಲದ ಪ್ರೀತಿ. ಆದರೆ, ಸಾಂತಾ ಕ್ಲಾಸ್ ಗಿಫ್ಟ್ ಕೊಡೋಕೆ ಕೊಂಚ ವಿಳಂಬ ಮಾಡಿದ ಎಂಬ ಕಾರಣಕ್ಕೆ 4 ವರ್ಷದ ಬಾಲಕ ಕಣ್ಣೀರಿಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಸಾಂತಾ ಬಳಿ ಬಾಲಕ ಗನ್ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಸಾಂತಾ ಗನ್ಗಳನ್ನೆಲ್ಲ ಕೊಡೋದಿಲ್ಲ ಎಂದು ಹೇಳಿದ್ದಾನೆ. ಬಾಲಕನ ತಾಯಿ ತನ್ನ ಮಗ ಕೇಳಿದ್ದೆ ಆಟಿಕೆ ಗನ್ನ್ನು ಎಂದು ಹೇಳಿದ್ದಾರೆ. ಆದರೆ, ಸಂತಾ ಅದಕ್ಕೂ ನೋ ಎಂದು ಹೇಳಿದ್ದಾನೆ. ಇದರಿಂದ ಬೇಜಾರಾದ ಬಾಲಕ ಜೋರಾಗಿ ಅಳೋಕೆ ಶುರು ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್ ಮಾಡ್ತಿದೆ.
blob:https://www.facebook.com/db7913c1-db95-494e-9b07-94489cc22e5e