ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಡಿಜಿಟಲ್ ಫ್ಲಾಟ್ಫಾರ್ಮ್ನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿನ್ ಎಂಬ ಅಪ್ಲಿಕೇಶನ್ ಮೂಲಕ ನೀವು ಕೊರೊನಾ ಲಸಿಕೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಕೋವಿನ್ ಡಿಜಿಟಲ್ ಫ್ಲಾಟ್ಫಾರ್ಮ್ ಲಸಿಕೆ ಡೇಟಾವನ್ನ ದಾಖಲು ಮಾಡಲು ಸಹಾಯ ಮಾಡಬಲ್ಲ ಮೊಬೈಲ್ ಅಪ್ಲಿಕೇಶನ್ನ್ನು ಹೊಂದಿದೆ. ಈ ಲಸಿಕೆ ಪಡೆಯಬೇಕು ಎಂದು ಬಯಸಿದವರು ಇಲ್ಲಿ ತಮ್ಮನ್ನ ತಾವು ನೋಂದಾಯಿಸಿಕೊಳ್ಳಬಹುದು. ಕೋ ವಿನ್ ಅಪ್ಲಿಕೇಶನ್ನಲ್ಲಿ 5 ಬಗೆಗಳಿಗೆ. ನಿರ್ವಾಹಕ ಮಾಡ್ಯೂಲ್, ನೋಂದಣಿ ಮಾಡ್ಯೂಲ್, ವ್ಯಾಕ್ಸಿನೇಷನ್ ಮಾಡ್ಯೂಲ್ , ಫಲಾನುಭವಿ ಸ್ವೀಕೃತಿ ಮಾಡ್ಯೂಲ್ ಹಾಗೂ ವರದಿ ಮಾಡ್ಯೂಲ್ ಎಂಬ ಐದು ವಿಭಾಗವಿದೆ ಎಂದು ಅವರು ಮಾಹಿತಿ ನೀಡಿದ್ರು.
ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೊರೊನಾ ಲಸಿಕೆಗೆ ನೋಂದಣಿ ಮಾಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ
09-12-2020 6:14PM IST / No Comments / Posted In: Corona, Corona Virus News, Latest News, India, Live News