alex Certify ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: 55 ವರ್ಷ ಮೇಲ್ಪಟ್ಟವರ ಕತೆ ಏನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: 55 ವರ್ಷ ಮೇಲ್ಪಟ್ಟವರ ಕತೆ ಏನು..?

ಜರ್ಮನಿಯ ಬಯೋಟೆಕ್​ ಎಸ್​​ಇ ಹಾಗೂ ಅಮೆರಿಕ ಮೂಲದ ಫೈಜರ್​ ಇಂಕ್​ ಅಭಿವೃದ್ಧಿ ಪಡಿಸಿದ ಕೋವಿಡ್​ ಲಸಿಕೆಯೊಂದಿಗೆ ಬ್ರಿಟನ್​ ತನ್ನ ಜನತೆಯನ್ನ ಕೊರೊನಾದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಬ್ರಿಟನ್​ನಲ್ಲಿ ಅನುಮೋದನೆಗೊಂಡಿರುವ ಈ ಲಸಿಕೆ ಈಗಲೂ ಕೂಡ ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡದೇ ಉಳಿದಿದೆ.

ಈ ನಡುವೆ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೇಜೆನಿಕಾ ಪಿಎಲ್​ಸಿ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಮಂಗಳವಾರ ದಿ ಲ್ಯಾನ್ಸೆಟ್​ನಲ್ಲಿ ಪ್ರಕಟವಾದ ಪ್ರಾಯೋಗಿಕ ಫಲಿತಾಂಶಗಳು ಹೇಳಿವೆ. ಆದರೆ, ಕೊರೊನಾ ವೈರಸ್​ನಿಂದ ಅಪಾಯದಲ್ಲಿರುವ 55 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಈ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ ಅನ್ನೋದಕ್ಕೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿದೆ.
ಯಾಕಂದ್ರೆ ಈ ಲಸಿಕೆಗಳನ್ನ ಮೊದಲು ಕಿರಿಯರ ಮೇಲೆ ಪ್ರಯೋಗಿಸಿ ಬಳಿಕ ವಯಸ್ಕರ ಮೇಲೆ ಪ್ರಯೋಗಿಸಲಾಗಿತ್ತು. ಹಾಗಾಗಿ ವೃದ್ಧರ ಮೇಲೆ ಲಸಿಕೆ ಪರಿಣಾಮವನ್ನ ಅಧ್ಯಯನ ಮಾಡೋಕೆ ಸಾಕಷ್ಟು ಸಮಯ ಸಿಕ್ಕಿರಲಿಲ್ಲ ಅಂತಾ ಆಕ್ಸ್​ಫರ್ಡ್​ ಲಸಿಕೆ ತನಿಖಾಧಿಕಾರಿ ಆಂಡ್ರ್ಯೂ ಪೊಲಾರ್ಡ್​ ಹೇಳಿದ್ದಾರೆ. 55 ವರ್ಷ ಮೇಲ್ಪಟ್ಟವರಿಗೂ ಈ ಲಸಿಕೆ ಸೂಕ್ತವಾಗುತ್ತೆ ಅಂತಾ ಅಂದಾಜು ಮಾಡಲಾಗಿದೆಯೇ ಹೊರತು ಯಾವುದೇ ನಿಖರ ಫಲಿತಾಂಶ ದೊರಕಿಲ್ಲ.
ಇನ್ನು ಬ್ರಿಟನ್​ನಲ್ಲಿ ಅನುಮೋದನೆಗೊಂಡಿರುವ ಫೈಜರ್​ ಲಸಿಕೆಗಳನ್ನ ಯುರೋಪ್​ ಹಾಗೂ ಅಮೆರಿಕದಲ್ಲಿ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ. ಮೊಡರ್ನಾ ಲಸಿಕೆಗೆ ಹೋಲಿಸಿದ್ರೆ ಆಕ್ಸ್​ಫರ್ಡ್​ ಲಸಿಕೆ ಕಡಿಮೆ ಪರಿಣಾಮಕಾರಿಯಾಗಿದೆ ಅನ್ನೋದು ಪ್ರಯೋಗಗಳ ಫಲಿತಾಂಶದಲ್ಲಿ ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...