ತಮ್ಮ ಅಭಿಮಾನಿಗಳನ್ನ ರಂಜಿಸುವ ನಿಟ್ಟಿನಲ್ಲಿ ಬಾಲಿವುಡ್ ನಟಿ ಕಾಜೊಲ್ ಕೋವಿಡ್ ಕುರಿತಾದ ಹಾಸ್ಯವೊಂದನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕ್ರಿಸ್ಮಸ್ ಮರದ ಸುಂದರವಾದ ಫೋಟೋ ಶೇರ್ ಮಾಡಿರುವ ಕಾಜೊಲ್ ಈ ವರ್ಷದಲ್ಲಿ ನನ್ನ ತೂಕ ತುಂಬಾನೇ ಏರಿಕೆಯಾಗಿದೆ. ಎಷ್ಟೆಂದರೆ ನನ್ನ ಫೋನ್ ಕೂಡ ನನ್ನ ಮುಖವನ್ನ ಗುರುತಿಸುತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
46 ವರ್ಷದ ನಟಿ ದೇಶದಲ್ಲಿ ಲಾಕ್ಡೌನ್ ಜಾರಿಯಾದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ತನ್ನ ಹಾಗೂ ತನ್ನ ಕುಟುಂಬದ ಫೋಟೋಗಳನ್ನ ಶೇರ್ ಮಾಡುತ್ತಲೇ ಇರುವ ಕಾಜೊಲ್ ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ಕೊಡುತ್ತಲೇ ಇರ್ತಾರೆ.