ಮ್ಯಾನ್ಮಾರ್ನ ಯಾಂಗನ್ ಪಟ್ಟಣದಲ್ಲಿರುವ 69 ವರ್ಷದ ಬೌದ್ಧ ಭಿಕ್ಷುವೊಬ್ಬರು ತಮ್ಮ ಸೈಕ್ತಾ ಥುಕಾ ಮೊನಾಸ್ಟ್ರಿಯನ್ನು ಹಾವುಗಳಿಗೆ ಆಶ್ರಯ ಕೊಡುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ.
ಕಾಳ ಸಂತೆಯಲ್ಲಿ ಮಾರಾಟವಾಗಿ ಮಾಂಸ ದಂಧೆಗೆ ಪ್ರಾಣ ಕೊಡಬೇಕಿದ್ದ ಈ ಹಾವುಗಳನ್ನು ವಿಲಾತಾ ಹೆಸರಿನ ಈ ಭಿಕ್ಷುವೊಬ್ಬರು ತಂದು ರಕ್ಷಿಸಿ ಆಶ್ರಯ ಕೊಟ್ಟಿದ್ದಾರೆ. ಹೆಬ್ಬಾವುಗಳು, ಮಂಡಲದ ಹಾವುಗಳು ಹಾಗೂ ನಾಗರಹಾವುಗಳಿಗೆ ಈ ಭಿಕ್ಷು ಆಶ್ರಯ ಕೊಟ್ಟಿದ್ದಾರೆ.
ಈ ಹಾವುಗಳು ಖುದ್ದು ತನ್ನ ಮಕ್ಕಳ ಸಮಾನ ಎಂದು ಹೇಳಿಕೊಳ್ಳುವ ಈ ಭಿಕ್ಷು, ಅವುಗಳನ್ನು ಭಾರೀ ಆಸ್ಥೆಯಿಂದ ಪೋಷಿಸುತ್ತಿದ್ದಾರೆ. ಹಾವುಗಳನ್ನು ಕೊಲೆಗಾರರಿಗೆ ಮಾರುವುದಕ್ಕಿಂತ ಈ ಭಿಕ್ಷುಗೆ ಕೊಟ್ಟು ಪುಣ್ಯ ಪಡೆದುಕೊಳ್ಳುವುದು ಉತ್ತಮ ಎಂದು ಇಲ್ಲಿನ ಜನರ ಭಾವಿಸಿದ್ದಾರೆ. ಈ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತಿರುವುದಾಗಿ ಈ ಭಿಕ್ಷು ತಿಳಿಸಿದ್ದಾರೆ.
ನೆರೆಯ ಚೀನಾ ಹಾಗೂ ಥಾಯ್ಲೆಂಢ್ಗೆ ಈ ಹಾವುಗಳ ಕಳ್ಳಸಾಗಾಟವಾಗುತ್ತಿದೆ ಎಂದು ಪ್ರಾಣಿ ಸಂರಕ್ಷಣಾ ತಜ್ಞರು ತಿಳಿಸಿದ್ದಾರೆ.