12638 ಸಣ್ಣ ವಜ್ರಗಳನ್ನ ಹೊಂದಿರುವ ಹೂವಿನ ಆಕಾರದ ಉಂಗುರವು ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನ ನೋಂದಾಯಿಸಿದೆ.
ಈ ಅಮೂಲ್ಯ ವಿನ್ಯಾಸದ ಉಂಗುರುದ ಸೃಷ್ಟಿಕರ್ತ ಇದನ್ನ ಮಾರಾಟ ಮಾಡುವ ಯಾವುದೇ ಯೋಜನೆಯನ್ನ ಹೊಂದಿಲ್ಲವಂತೆ.
ಮೇರಿಗೋಲ್ಡ್ – ಸಮೃದ್ಧಿಯ ಉಂಗುರ ಎಂದು ಕರೆಯಲ್ಪಡುವ ದಪ್ಪನಾದ ವೃತ್ತಾಕಾರದ ಉಂಗುರ 165 ಗ್ರಾಂ ತೂಕ ಹೊಂದಿದೆ. ಈ ಉಂಗುರವನ್ನ ಆರಾಮಾಗಿ ಧರಿಸಬಹುದು ಅಂತಾ ಉಂಗುರ ತಯಾರಕ ಹರೀಶ್ ಬನ್ಸಾಲ್ ಹೇಳಿದ್ದಾರೆ.
10 ಸಾವಿರಕ್ಕಿಂತಲೂ ಹೆಚ್ಚು ವಜ್ರಗಳನ್ನ ಬಳಸಿ ಉಂಗುರ ನಿರ್ಮಾಣ ಮಾಡುವ ಗುರಿಯನ್ನ ಹೊಂದಿದ್ದೆ. ಆದರೆ ಇದೀಗ ಈ ಎಂಟು ಪದರದ ಉಂಗುರುದಲ್ಲಿ 12638 ವಜ್ರಗಳನ್ನ ಪೋಣಿಸುವಲ್ಲಿ ಯಶಸ್ವಿಯಾಗಿದ್ದೇನೆ ಅಂತಾ ಅವರು ಹೇಳಿದ್ರು.