ಮಿನ್ನೆಸೋಟದಲ್ಲಿ ಹೆದ್ದಾರಿ ಮೇಲೆಯೇ ತುರ್ತು ಭೂಸ್ಪರ್ಶ ಮಾಡಿದ ಸಣ್ಣ ವಿಮಾನದ ಪೈಲಟ್ನ್ನ ಅಮೆರಿಕ ಏರೋಬೇಟಿಕ್ಸ್ ಫ್ಲೈಯಿಂಗ್ ಟೀಂ ಪ್ರಶಸ್ತಿ ವಿಜೇತ ಎಂದು ಗುರುತಿಸಲಾಗಿದೆ.
ಸಿಂಗಲ್ ಇಂಜಿನ್ ಹೊಂದಿದ್ದ ಬೆಲ್ಲಂಕಾ ವೈಕಿಂಗ್ ವಿಮಾನವು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಆದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಬುಧವಾರ ರಾತ್ರಿ ಸೇಂಟ್ ಪಾಲ್ ಉಪನಗರ ಅರ್ಡೆನ್ ಪರ್ವತನವನ್ನ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಇಬ್ಬರಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲವೇ ಗಾಯಗಳು ವರದಿ ಆಗಿಲ್ಲ.
ಪೈಲಟ್ನ್ನು ಮಿನ್ನಿಯಾಪೊಲೀಸ್ ನಿವಾಸಿ 52 ವರ್ಷದ ಕ್ರೇಗ್ ಗಿಫೋರ್ಡ್ ಎಂದು ಗುರುತಿಸಲಾಗಿದೆ. 2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಅನ್ಲಿಮಿಟೆಡ್ ಏರ್ಬ್ಯಾಟಿಕ್ ತಂಡದಲ್ಲಿ 2017 ಹಾಗೂ 2019ರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯನ್ನ ಪ್ರತಿನಿಧಿಸಿದ್ದಾರೆ ಎಂದು ಪ್ರಾಯೋಗಿಕ ವಿಮಾನ ಸಂಘದ ವಕ್ತಾರ ಡಿಕ್ ನ್ಯಾಪಿನ್ಸ್ಕಿ ಹೇಳಿದ್ದಾರೆ.