1950ರ ಕಾಲದಲ್ಲಿ ಬೀಗ ಹಾಕಿದ್ದ ನಿರ್ಜನ ತೋಟದ ಮನೆಯೊಂದನ್ನ ಬ್ರಿಟನ್ನ ಫ್ಲೀಟ್ವುಡ್ನಲ್ಲಿ ಮರುಶೋಧಿಸಲಾಗಿದೆ.
ತಾತಿ ಮೇರಿ ಕೋವಲ್ ನಿಧನದ ಬಳಿಕ ಆಸ್ತಿಗಾಗಿ ಇಬ್ಬರು ಸಹೋದರರ ನಡುವೆ ಉಂಟಾದ ಕಲಹ ಹಾಗೂ ಸಂಬಂಧಿಕರಿಗೂ ಈ ಆಸ್ತಿಯ ಮೇಲೆ ಹಕ್ಕಿಲ್ಲದಿದ್ದ ಕಾರಣ ತೋಟದ ಮನೆ ಇಷ್ಟು ದಶಕಗಳಿಂದ ನಿರ್ಜನವಾಗಿತ್ತು ಎಂದು ಹೇಳಲಾಗ್ತಿದೆ.
1880ರಲ್ಲಿ ವಾಸ್ತುಶಿಲ್ಪಿ ಥಾಮಸ್ ಥಾರ್ನ್ಟನ್ ಎಂಬವರು ಈ ತೋಟದ ಮನೆಯನ್ನು ನಿರ್ಮಿಸಿದ್ದರು. ಲಂಕಾಷೈರ್ನ ಫ್ಲೀಟ್ವುಡ್ ಹೊರವಲಯದಲ್ಲಿ ಈ ತೋಟದ ಮನೆಯಿದೆ. ಒಡಹುಟ್ಟಿದವರ ಆಸ್ತಿ ಕಲಹದಿಂದ ತೋಟದ ಮನೆ ನಿರ್ಜನವಾಗಿದೆ ಅಂತಾ ದಿ ಸನ್ ವರದಿ ಮಾಡಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಜನ ತೋಟದ ಮನೆಯ ಫೋಟೋಗಳು ಹರಿದಾಡುತ್ತಿವೆ. ಇದರಲ್ಲಿ ಮುರಿದು ಬಿದ್ದ ಮಕ್ಕಳ ಆಟಿಕೆಗಳು, ರತ್ನ ಗಂಬಳಿ, 1953ರ ಕಾಲದ ಪತ್ರಿಕೆಗಳನ್ನ ಕಾಣಬಹುದಾಗಿದೆ. ದಶಕಗಳಿಂದ ಈ ಮನೆಯ ಹತ್ತಿರ ಯಾರೂ ಸುಳಿಯದ ಕಾರಣ ಉದ್ಯಾನವನ ಕಾಡಿನ ರೀತಿಯಲ್ಲಿ ಬೆಳೆದುಕೊಂಡಿದೆ.