ಸ್ಪ್ಯಾನಿಶ್ನ 20 ಮಕ್ಕಳಿಗೆ ಹೊಟ್ಟೆಯ ನೋವಿಗೆ ಔಷಧಿ ನೀಡುವ ಬದಲು ತಪ್ಪಾಗಿ ಕೂದಲು ಬೆಳೆಯುವ ಔಷಧಿ ನೀಡಿದ ಪರಿಣಾಮ ಮಕ್ಕಳ ಮೈ ತುಂಬಾ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಸಿರಪ್ಗಳ ಮೇಲೆ ಹೆಸರು ತಪ್ಪಾಗಿ ನಮೂದಾದ ಕಾರಣ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ.
ಮಕ್ಕಳಿಗೆ ಒಮೆಪ್ರಜೋಲ್ ನೀಡುವ ಬದಲಾಗಿ ಮಿನಿಕ್ಸಿಡಿಲ್ ನೀಡಿದ ಪರಿಣಾಮ ಈ ಅಚಾತುರ್ಯ ಸಂಭವಿಸಿದೆ ಅಂತಾ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಚಿಕ್ಕ ಮಕ್ಕಳ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕೂದಲು ಬೆಳೆದಿದ್ದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಕ್ಕಳು ಉತ್ತರ ಸ್ಪ್ಯಾನಿಶ್ನ ಕ್ಯಾಂಟಬ್ರಿಯಾ ಟೊರೆವೆಗಾ ನಿವಾಸಿಗಳೆಂದು ಗುರುತಿಸಲಾಗಿದೆ. 2018ರಲ್ಲಿ ಮಕ್ಕಳು ತಪ್ಪಾಗಿ ಈ ಔಷಧಿ ಸೇವಿಸಿದ್ದಾರೆ.
ಮಕ್ಕಳ ದೇಹದಲ್ಲಾಗಿರುವ ಈ ವಿಚಿತ್ರ ಬೆಳವಣಿಗೆಯಿಂದ ಕಂಗಾಲಾಗಿರುವ ಪೋಷಕರು ಔಷಧಿ ತಯಾರಿಕಾ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಮಕ್ಕಳ ದೇಹದಲ್ಲಾದ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಆಸ್ಪತ್ರೆ ಅಲೆಯುತ್ತಿದ್ದಾರೆ .