ಕೊರೊನಾ ವೈರಸ್ ವಿರುದ್ಧ ಸ್ಪುಟ್ನಿಕ್ ಲಸಿಕೆ ಬಳಕೆಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ ನೀಡಿದ ಒಂದು ದಿನದ ಬಳಿಕ ಮಾಸ್ಕೋದ ಮೇಯರ್ ಡಿಸೆಂಬರ್ 5ರಿಂದ ಲಸಿಕೆ ಬಳಕೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಲಸಿಕೆ ಬಳಕೆ ವಿಚಾರವಾಗಿ ಮಾತನಾಡಿದ ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬಯಾನಿನ್ ಶಿಕ್ಷಕರು, ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸ್ಪುಟ್ನಿಕ್ ವಿ ಲಸಿಕೆ ಮೊದಲು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಈ ವರ್ಷದ ಅಂತ್ಯದಲ್ಲಿ 2 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣ ಲಸಿಕೆಗಳನ್ನ ಉತ್ಪಾದನೆ ಮಾಡಬಹುದು ಎಂದು ತಯಾರಕರು ಹೇಳಿದ್ದರಿಂದ 2021ರ ಜನವರಿಯಿಂದ ಸಾಮೂಹಿಕ ಲಸಿಕೆ ಬಳಕೆ ಆರಂಭಿಸೋದಾಗಿ ರಷ್ಯಾದ ಅಧಿಕಾರಿಗಳು ಹೇಳಿದ್ದರು.
ಆದರೆ ಮುಂದಿನ ವಾರದಿಂದ ಲಸಿಕೆ ಬಳಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಿದ ಕೆಲವೇ ಗಂಟೆಗಳ ಬಳಿಕ ಪುಟಿನ್ ಈ ಪ್ರಕಟಣೆ ನೀಡಿದ್ದರು.