ಕೊರೊನಾ ಸೋಂಕನ್ನ ತಡೆಗಟ್ಟಲು ಬೇಕಾದ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಆರು ತಿಂಗಳ ಸಮಯ ಬೇಕಾಗಿರೋದ್ರಿಂದ ಸಾಮಾಜಿಕ ದೂರ, ಮಾಸ್ಕ್ ಸೇರಿದಂತೆ ಕೊರೊನಾ ಮಾರ್ಗಸೂಚಿಗಳೇ ಸೋಂಕು ಹರಡೋದನ್ನ ತಡೆಗಟ್ಟಲು ಇರುವ ಪರಿಹಾರವಾಗಿದೆ.
ಇನ್ನೂ ಮೂರರಿಂದ ಆರು ತಿಂಗಳುಗಳ ಕಾಲ ಸೂಕ್ತ ಪ್ರಮಾಣ ಲಸಿಕೆಯನ್ನ ಪೂರೈಸಲು ನಾವು ಶಕ್ತರಿಲ್ಲ ಅಂತಾ ಡಬ್ಲೂಹೆಚ್ಒನ ತುರ್ತು ಪರಿಸ್ಥಿತಿ ತಜ್ಞ ಮೈಕ್ ರಯಾನ್ ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆ ಲಭ್ಯವಾಗೋದು ವಿಳಂಬವಾಗೋದ್ರಿಂದ ಅಂಗಡಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಯಾವಾಗಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಡಬ್ಲುಹೆಚ್ಓ ಸೂಚನೆ ನೀಡಿದೆ.
ಪ್ರತಿಯೊಬ್ಬರೂ ಕನಿಷ್ಟ ಒಂದು ಮೀಟರ್ ಅಂತರ ಕಾಪಾಡಲೇಬೇಕು. ಇದು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಚೆನ್ನಾಗಿ ಗಾಳಿ ಬರುತ್ತಿದ್ದರೂ ಸಹ ಮಾಸ್ಕ್ ಧರಿಸೋದನ್ನ ಮರೆಯದಿರಿ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಕಿವಿಮಾತನ್ನ ಹೇಳಿದೆ. ಬ್ರಿಟನ್ ಸರ್ಕಾರ ಲಸಿಕೆ ಬಳಕೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಈ ಮಹತ್ವದ ಮಾಹಿತಿಯನ್ನ ನೀಡಿದೆ.