ಆನ್ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್ನಲ್ಲಿ ಗ್ರಾಹಕರನ್ನ ಸೆಳೆಯೋಕೆ ಒಂದಿಲ್ಲೊಂದು ಆಫರ್ಗಳನ್ನ ಕೊಡ್ತಾನೆ ಇರ್ತಾರೆ. ಆದರೆ ತಾಂತ್ರಿಕ ದೋಷ ಅಥವಾ ಇಂಟರ್ನೆಟ್ ಸಮಸ್ಯೆಯಿಂದಾಗಿ ಈ ಆನ್ಲೈನ್ ಅಪ್ಲಿಕೇಶನ್ ಬಳಕೆ ಒಮ್ಮೊಮ್ಮೆ ಕಿರಿಕಿರಿ ಎನಿಸಿಬಿಡುತ್ತೆ.
ಇಂತಹದ್ದೇ ವಿಚಿತ್ರ ಘಟನೆಯಲ್ಲಿ ಫಿಲಿಫೈನ್ಸ್ನಲ್ಲಿದ್ದ ಮನೆಯೊಂದರ ಮುಂದೆ 40ಕ್ಕೂ ಹೆಚ್ಚು ಆರ್ಡರ್ಗಳು ಸರತಿ ಸಾಲಲ್ಲಿ ಬಂದು ನಿಂತಿದೆ.
ಊಟಕ್ಕೆಂದು ಅಜ್ಜಿ ಹಾಗೂ ಮೊಮ್ಮಗಳು ಚಿಕನ್ನ ಕೆಲ ಖಾದ್ಯಗಳನ್ನ ಬುಕ್ ಮಾಡಿದ್ದರು. ಆದರೆ ಇಂಟರ್ನೆಟ್ ಸಮಸ್ಯೆಯಿಂದ ಬಾಲಕಿ ಹಲವಾರು ಬಾರಿ ಬುಕಿಂಗ್ ಆಪ್ಶನ್ ಕ್ಲಿಕ್ ಮಾಡಿದ ಕಾರಣ ಬರೋಬ್ಬರಿ 42 ಮಂದಿ ಡೆಲಿವರಿ ಬಾಯ್ಸ್ ಫುಡ್ ಸಮೇತ ಬಂದು ಮನೆಯ ಮುಂದೆ ನಿಂತಿದ್ದಾರೆ.
ಏಳು ವರ್ಷದ ಬಾಲಕಿ ತನ್ನ ಪೋಷಕರು ಕೆಲಸಕ್ಕೆಂದು ಮನೆಯಿಂದ ಹೊರಹೋದಾಗ ಹಲವು ಬಾರಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದ್ದಳು. ಆದರೆ ಇದೇ ಮೊದಲ ಬಾರಿಗೆ ಬಾಲಕಿಯಿಂದ ಇಂತಹದ್ದೊಂದು ಪ್ರಮಾದವಾಗಿದೆ. ಬಾಲಕಿ ತಾನು ಮಾಡಿದ ತಪ್ಪಿನಿಂದಾಗಿ ಒಂದೇ ಸಮನೆ ಅಳಲು ಆರಂಭಿಸಿದ್ದಾಳೆ. ಈ ಘಟನೆ ನೋಡಿ ಮರುಗಿದ ಸ್ಥಳೀಯರು ಸ್ವಯಂ ಪ್ರೇರಿತರಾಗಿ ಕೆಲ ಆಹಾರಗಳನ್ನ ಖರೀದಿ ಮಾಡಿದ್ದಾರೆ.