ಕೊರೊನಾದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಆನ್ಲೈನ್ ಶಿಕ್ಷಣದ ಮೊರೆ ಹೋಗಿವೆ. ಆದರೆ ವಿಶ್ವದ ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮನೆಯಲ್ಲಿ ಇಂಟರ್ನೆಟ್ ಸೌಕರ್ಯ ಇಲ್ಲದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಂತಾ ಯುಎನ್ ವರದಿ ಆಘಾತಕಾರಿ ಮಾಹಿತಿಯೊಂದನ್ನ ನೀಡಿದೆ.
ವಿಶ್ವದಲ್ಲಿ 3 ರಿಂದ 17 ವರ್ಷ ವಯಸ್ಸಿನ ಸರಿ ಸುಮಾರು 1.3 ಬಿಲಿಯನ್ ವಿದ್ಯಾರ್ಥಿಗಳು ಶಿಕ್ಷಣ ಸೌಕರ್ಯವಿಲ್ಲದೇ ಒದ್ದಾಡುತ್ತಿದ್ದಾರೆ.
ಯುವ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಇದ್ದು ವಿಶ್ವದಲ್ಲಿ ಶೇಕಡಾ 63ರಷ್ಟು ಯುವ ವಿದ್ಯಾರ್ಥಿಗಳೂ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.
ಕೊರೊನಾದಿಂದಾಗಿ ವಿಶ್ವದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಮಹತ್ವ ಹೆಚ್ಚಾಗಿರೋದು ನಿಜ. ಆದರೆ ಇಂಟರ್ನೆಟ್ ಸೌಕರ್ಯವಿಲ್ಲದ ಕಾರಣ ಈ ವರ್ಷ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಯುಎನ್ಐಸಿಇಎಫ್ ಮುಖ್ಯಸ್ಥೆ ಹೆನ್ರಿಟಾ ಕಳವಳ ವ್ಯಕ್ತಪಡಿಸಿದ್ದಾರೆ.