ಅಪಘಾತದಿಂದಾಗಿ ಮನೆಯಿಂದ ಹೊರಬರಲಾಗದೇ ಕಷ್ಟ ಅನುಭವಿಸುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನ ಕ್ರೇನ್ ಮೂಲಕ ಸ್ಥಳಾಂತರಿಸಿದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.
ಪೆಪಿರ್ಗ್ನಾನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ರಕ್ಷಣಾ ಸಿಬ್ಬಂದಿ ಭಾಗಿಯಾದ್ರು. ಫ್ಲ್ಯಾಟ್ನಲ್ಲಿ ಸಿಲುಕಿದ್ದ ವ್ಯಕ್ತಿ ಬರೋಬ್ಬರಿ 250ರಿಂದ 300 ಕೆಜಿ ತೂಕ ಹೊಂದಿದ್ದ ಎನ್ನಲಾಗಿದೆ.
ವರ್ಷದ ಹಿಂದೆ ಹಾಸಿಗೆಯಿಂದ ಬಿದ್ದಿದ್ದ ಈತ ಏಳಲಾಗದೇ ನರಕಯಾತನೆ ಅನುಭವಿಸಿದ್ದ. ಡಿಸೆಂಬರ್ ತಿಂಗಳಲ್ಲಿ ಈತನ ರಕ್ಷಣೆಗೆ ಸಿಬ್ಬಂದಿ ಮುಂದಾಗಿದ್ದರಾದರೂ ರಕ್ಷಣಾ ಕಾರ್ಯ ವಿಫಲವಾಗಿತ್ತು.
ಆದರೆ ಈ ಬಾರಿ ಕ್ರೇನ್ ಸಹಾಯದಿಂದ ಈತನನ್ನ ಅಪಾರ್ಟ್ಮೆಂಟ್ನಿಂದ ಸ್ಥಳಾಂತರಿಸಲಾಗಿದೆ ಎಂದು ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿದೆ.