ವಿಮಾನದಲ್ಲಿ ಆನ್ಬೋರ್ಡ್ ಟಿವಿಯನ್ನ ನೋಡಲು ಅಡ್ಡಿಪಡಿಸಿದ ಸಹ ಪ್ರಯಾಣಿಕೆಯ ಕೂದಲಿಗೆ ಮಹಿಳೆಯೊಬ್ಬಳು ಚಿವಿಂಗ್ ಗಮ್ ಅಂಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಕ್ಟಾಕ್ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಯುವತಿಯ ಕೂದಲನ್ನ ಕಾಫಿಯಲ್ಲಿ ಮುಳುಗಿಸೋದನ್ನ ನೋಡಬಹುದಾಗಿದೆ.
ಮುಂಬದಿ ಸೀಟಿನಲ್ಲಿ ಕುಳಿತಿದ್ದ ಯುವತಿ ತನ್ನ ಉದ್ದನೆಯ ಕೂದಲನ್ನ ಆನ್ಬೋರ್ಡ್ ಟಿವಿ ಪರದೆ ಮೇಲೆ ಹಾಕುವ ಮೂಲಕ ಹಿಂಬದಿ ಸೀಟಿನಲ್ಲಿದ್ದ ಮಹಿಳೆಗೆ ಕಿರಿಕಿರಿ ಉಂಟು ಮಾಡಿದ್ದಾಳೆ.
ಇದರಿಂದ ಕೋಪಗೊಂದ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ಆಕೆಯ ಕೂದಲಿಗೆ ಚ್ಯೂವಿಂಗ್ ಗಮ್ ಅಂಟಿಸಿದ್ದು ಮಾತ್ರವಲ್ಲದೇ….ನೇಲ್ ಕಟರ್ ಸಹಾಯದಿಂದ ಆಕೆಯ ಕೂದಲನ್ನ ಕತ್ತರಿಸಿ ಕಾಫಿ ಮಗ್ನೊಳಗೆ ಹಾಕಿದ್ದಾಳೆ.
https://youtu.be/4SCSr2tBYDg?t=1