ಕೊರೊನಾ ವೈರಸ್ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ.
ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ.
ಇಂತಹ ಪರಿಸ್ಥಿತಿಯಲ್ಲಿ ಫೋನ್ ಕಾಲ್ ಹಾಗೂ ವಿಡಿಯೋ ಕಾಲ್ ದೂರದಲ್ಲಿರುವವರನ್ನೂ ಹತ್ತಿರ ಸೇರಿಸುವ ಕೆಲಸ ಮಾಡ್ತಿದೆ.
ಕೊರೊನಾದಿಂದಾಗಿ ತಂದೆ – ತಾಯಿಯಿಂದ ದೂರ ಇರುವ ಮಗಳಿಗಾಗಿ ತಂದೆ ವಿಶೇಷ ವಿಡಿಯೋ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
ಮನೆಯ ಬಾಗಿಲ ಬಳಿ ಇರುವ ಕ್ಯಾಮರಾ ನೋಡಿಕೊಂಡು ಪ್ರತಿದಿನ ತಂದೆ ಮಾತನಾಡುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. 42 ಸೆಕೆಂಡ್ಗಳ ಈ ವಿಡಿಯೋ ಫೇಸ್ಬುಕ್ನಲ್ಲಿ ಶೇರ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.facebook.com/ring/videos/1115035638966523/?t=3