ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ ಬೀಳಲಿದೆ.
ಮಾಸ್ಕ್ ಹಾಕದೇ ತಿರುಗಾಡುವವರಿಗೆ ದಂಡ ವಿಧಿಸಿ ಉಚಿತ ಮಾಸ್ಕ್ನ್ನ ನಾವೇ ನೀಡುತ್ತೇವೆ ಎಂದು ಹೇಳಿದೆ.
ಕೊರೊನಾ ವೈರಸ್ ನಿಯಂತ್ರಣ ಮಾಡುವ ಹಿನ್ನೆಲೆ ಮುಂಬೈ ಪಾಲಿಕೆ ಈ ಕ್ರಮಗಳನ್ನ ಕೈಗೊಂಡಿದೆ.
ಏಪ್ರಿಲ್ನಿಂದ ನವೆಂಬರ್ 28ರವರೆಗಿನ ಲೆಕ್ಕಾಚಾರದ ಪ್ರಕಾರ ಮುಂಬೈನಲ್ಲಿ ಈವರೆಗೆ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿದ್ದ 4.85 ಲಕ್ಷ ಮಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಇಂಥವರಿಂದ ಸಂಗ್ರಹಿಸಲಾದ ದಂಡದ ಒಟ್ಟು ಮೊತ್ತ 10.7 ಕೋಟಿ ರೂಪಾಯಿ ಆಗಿದೆ ಎಂದು ಬಿಎಂಸಿ ಹೇಳಿದೆ.
ಹೀಗಾಗಿ ಕೇವಲ ದಂಡ ಮಾತ್ರ ಕೊರೊನಾ ನಿಯಂತ್ರಣ ಮಾಡೋಕೆ ನೆರವಾಗಲ್ಲ ಎಂಬುದನ್ನ ಮನಗಂಡ ಮುಂಬೈ ಪಾಲಿಕೆ ಇದೀಗ ಮಾಸ್ಕ್ ಹಾಕದವರಿಗೆ ದಂಡದ ಜೊತೆಗೆ ಉಚಿತ ಮಾಸ್ಕ್ ವಿತರಣೆ ಮಾಡೋಕೆ ನಿರ್ಧರಿಸಿದೆ.