ಸೆಪ್ಟೆಂಬರ್ 20ರಂದು ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಆಡಿಯೋ ಫೀಡ್ ಸಮಸ್ಯೆಯಿಂದಾಗಿ ಸುಮಾರು 20 ನಿಮಿಷಗಳ ಅಧಿವೇಶನಕ್ಕೆ ಅಡ್ಡಿಯಾಗಿತ್ತು ಅಂತಾ ಕೇಂದ್ರ ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ನೀಡಿದೆ.
ಆರ್ಟಿಐ ಅರ್ಜಿಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಲೋಕೋಪಯೋಗಿ ಇಲಾಖೆ, 2020ರ ಸಪ್ಟೆಂಬರ್ 20ರಂದು ಮಧ್ಯಾಹ್ಯ 1.05ರಿಂದ 1.35ರವರೆಗೆ ಆಡಿಯೋ ಫೀಡ್ ಸಮಸ್ಯೆ ಉಂಟಾಗಿತ್ತು. ಕೆಲ ಸಂಸದರು ಸಭಾಧ್ಯಕ್ಷರ ಆಸನದಲ್ಲಿದ್ದ ಮೈಕ್ಗೆ ಹಾನಿ ಉಂಟು ಮಾಡಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರಿವಂಶ್ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡಿದ್ದರು.
ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಮೈಕ್ ಹೊರತುಪಡಿಸಿ ಬೇರೆ ಯಾವುದೇ ಆಸನದಲ್ಲಿ ಆ ಸಮಯದಲ್ಲಿ ಮೈಕ್ ಆನ್ ಆಗಿರಲಿಲ್ಲ. ಆದ್ದರಿಂದ ಮೈಕ್ ಮುರಿದುಹೋದಾಗ ಈ ಸಮಸ್ಯೆ ಉಂಟಾಗಿದೆ. ಇದನ್ನ ಸರಿ ಮಾಡೋಕೆ ಸರಿ ಸುಮಾರು ಅರ್ಧ ಗಂಟೆ ಸಮಯ ಹಿಡಿಯಿತು ಅಂತಾ ಕೇಂದ್ರ ಲೋಕೋಪಯೋಗಿ ಇಲಾಖೆ ಟ್ವಿಟರ್ನಲ್ಲಿ ಸ್ಪಷ್ಟೀಕರಣ ನೀಡಿದೆ.