ಎಂದಿನಂತೆ ಸಂಜೆಯ ವಾಯುವಿಹಾರಕ್ಕೆಂದು ಮುಂಬಯಿಯ ಜೂಹೂ ಬೀಚ್ನತ್ತ ಬಂದಿದ್ದ ಮಾಯಾನಗರಿಯ ನಿವಾಸಿಗಳಿಗೆ ಅಚ್ಚರಿ ಮೂಡಿಸುವ ದೃಶ್ಯಾವಳಿಯೊಂದು ಕಣ್ಣಿಗೆ ಬಿದ್ದಿದೆ.
ನೀಲಿ ಬಣ್ಣದ ಬೆಳಕನ್ನು ಬೀರುವ ಅಲೆಯೊಂದು ಸಂಜೆಯ ಕತ್ತಲಲ್ಲಿ ಮಿಂಚುತ್ತಿರುವ ಪ್ರಕೃತಿಯ ಈ ದೃಶ್ಯಕಾವ್ಯವನ್ನು ಕಣ್ಣಿಗೆ ತುಂಬಿಕೊಂಡಿದ್ದಾರೆ ವೀಕ್ಷಕರು. ಬಯೋಲುಮಿನಿಸೆನ್ಸ್ ಎಂದು ಈ ಪ್ರಕ್ರಿಯೆಯನ್ನು ಕರೆಯಲಾಗುತ್ತದೆ.
ಜಗತ್ತಿನ ಅನೇಕ ಕಡಲ ತೀರಗಳಲ್ಲಿ ಈ ಬಯೋಲುಮಿನಿಸೆನ್ಸ್ ಪ್ರಕ್ರಿಯೆಯನ್ನು ನೋಡಬಹುದಾಗಿದೆ. ಇಂಡೋನೇಷ್ಯಾ, ಅಮೆರಿಕ, ವಿಯೆಟ್ನಾಂ, ಆಸ್ಟ್ರೇಲಿಯಾ, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಈ ಕ್ರಿಯೆಯನ್ನು ಕಾಣಬಹುದಾಗಿದೆ.
ನಾಕ್ಟಿಲುಕಾ ಸಿಂಟಿಲನ್ಸ್ ಹೆಸರಿನ ಪ್ಲಾಂಕ್ಟನ್ ಈ ದೃಶ್ಯಕಾವ್ಯಕ್ಕೆ ಕಾರಣವಾಗಿದೆ. ಈ ಪ್ಲಾಂಕ್ಟನ್ ಅನ್ನು ಸೀ ಸ್ಪಾರ್ಕಲ್ ಎಂದೂ ಸಹ ಕರೆಯಲಾಗುತ್ತದೆ.