ಬುಲ್ ಶಾರ್ಕ್ವೊಂದು ದೈತ್ಯಾಕಾರದ ಮೊಸಳೆಗೆ ಮುಖಾಮುಖಿಯಾದ ಭಯಾನಕ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಚೆಲ್ಸಿಯಾ ಹಾಗೂ ಬ್ರೈಸ್ ಕುನನೂರ್ರಾದ ಇವಾನ್ ಹೋ ಕ್ರಾಸಿಂಗ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಡ್ರೋಣ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೂಟೇಜ್ನಲ್ಲಿ ಎರಡು ಭಯಾನಕ ಸಮುದ್ರವಾಸಿಗಳು ಮುಖಾಮುಖಿಯಾಗೋದನ್ನ ನೋಡಬಹುದಾಗಿದೆ. ಸುಮಾರು 17 ಅಡಿ ಉದ್ದದ ಮೊಸಳೆ ಮುಖಾಮುಖಿಯಾಗ್ತಿದ್ದಂತೆ ಶಾರ್ಕ್ ತನ್ನ ದಿಕ್ಕನ್ನ ಬದಲಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಈ ವಿಡಿಯೋವನ್ನ ಯೂ ಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಲಕ್ಷಕ್ಕೂ ಹೆಚ್ಚು ವೀವ್ಸ್ಗಳನ್ನ ಪಡೆದಿದೆ. ಇನ್ನಿತರ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲೂ ಈ ವಿಡಿಯೋವನ್ನ ನೆಟ್ಟಿಗರು ಹಂಚಿಕೊಂಡಿದ್ದಾರೆ.