ಅಮೆರಿಕದ ಪ್ರವಾಸಿಯೊಬ್ಬರು ತಾವು ಮೂರು ವರ್ಷಗಳ ಹಿಂದೆ ರೋಮನ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಕದ್ದಿದ್ದ ಮಾರ್ಬಲ್ ಕಲ್ಲೊಂದನ್ನು ಮ್ಯೂಸಿಯಂಗೆ ಹಿಂದಿರುಗಿಸಿದ್ದಾರೆ.
2017ರಲ್ಲಿ ತಮ್ಮ ಭೇಟಿಯ ವೇಳೆ ಕದ್ದಿದ್ದ ಈ ಮಾರ್ಬಲ್ ಕಲ್ಲಿನೊಂದಿಗೆ ಕ್ಷಮಾಪಣಾ ಪತ್ರವನ್ನೂ ಸಹ ಈ ಪ್ರವಾಸಿ ಬರೆದುಕೊಟ್ಟಿದ್ದಾರೆ. ತನ್ನದಲ್ಲದ ವಸ್ತುವನ್ನು ತಾನು ತೆಗೆದುಕೊಂಡು ಹೋಗಿದ್ದು ದೊಡ್ಡ ತಪ್ಪಾಗಿದೆ ಎಂದು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ ಈ ಪ್ರವಾಸಿ.
ಕಲ್ಲಿನ ಮೇಲೆ ಬರೆಯಲಾಗಿದ್ದ ‘To Sam, love Jess, Rome 2017’ ಸಂದೇಶವನ್ನು ತಾನೆಷ್ಟು ಪ್ರಯತ್ನಿಸಿದರೂ ಅಳಿಸಲು ಸಾಧ್ಯವಾಗದೇ ಹೋಗಿದ್ದಾಗಿ ಈ ಪತ್ರದಲ್ಲಿ ಬರೆದಿದ್ದಾರೆ ಜೆಸ್ ಹೆಸರಿನ ಈ ಮಹಿಳೆ. ತನಗೀಗ ಇನ್ನಷ್ಟು ಪ್ರಬುದ್ಧತೆ ಬೆಳೆದಿದ್ದು, ತಾನು ಮಾಡಿದ್ದು ತಪ್ಪಾಗಿದೆ ಎಂಬ ಅರಿವು ಮೂಡಿದ್ದಾಗಿ ಹೇಳಿಕೊಂಡಿದ್ದಾರೆ ಜೆಸ್.