ಕೊಚ್ಚಿ: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 18 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟರ್ ಇಂಟಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕೇರಳ ಕಸ್ಟಮ್ಸ್ ಕಮೀಷನರೇಟ್ ಟ್ವೀಟ್ ಮಾಡಿದೆ. ವಿಶೇಷ ಎಂದರೆ 364 ಗ್ರಾಂ ಬಂಗಾರವನ್ನು ಪವರ್ ಬ್ಯಾಂಕ್ ನ ಸ್ಕ್ರೂ ಹಾಗೂ ಅದರ ಸ್ವಿಚ್ ಗಳಾಗಿ ಮಾರ್ಪಡಿಸಿ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು.
ಇನ್ನೊಂದು ಪ್ರಕರಣದಲ್ಲಿ 463 ಗ್ರಾಂ ಬಂಗಾರವನ್ನು 3 ಕ್ಯಾಪ್ಸೂಲ್ ಮಾಡಿದ ವ್ಯಕ್ತಿಯೊಬ್ಬ ಅದನ್ನು ತನ್ನ ಗುದನಾಳದಲ್ಲಿ ಇಟ್ಟು ದುಬೈನಿಂದ ತಂದಿದ್ದ.