ಎಸ್ಬಿಐನ ಮಾಸ್ಟರ್ ಕಾರ್ಡ್ ಬಳಕೆದಾರರು ನೀವಾಗಿದ್ದಾರೆ ಇನ್ಮುಂದೆ ನೀವು ಶಾಪಿಂಗ್ ಹೋದ ಕಡೆಯೆಲ್ಲ ಕಾರ್ಡ್ನ್ನ ತೆಗೆದುಕೊಂಡು ಹೋಗಬೇಕು ಎಂಬ ಅವಶ್ಯಕತೆ ಇಲ್ಲ. ಎಸ್ಬಿಐ ಕಾರ್ಡ್ ಅಪ್ಲಿಕೇಷನ್ ಮೂಲಕ ನೀವು ಕಾರ್ಡ್ಲೆಸ್ ವ್ಯವಹಾರ ನಡೆಸಬಹುದಾಗಿದೆ.
ಮಾಸ್ಟರ್ ಕಾರ್ಡ್ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ ಮಾಸ್ಟರ್ ಕಾರ್ಡ್ ಟೋಕನೈಸೇಶನ್ ಫ್ಲಾಟ್ಫಾರ್ಮ್ ಭಾರತದಲ್ಲಿ ಕ್ರೆಡಿಟ್ ಬಳಸುವವರ ಪಾಲಿಗೆ ಮೊದಲ ಅಪ್ಲಿಕೇಶನ್ ಆಗಿದೆ.
ಈ ಸೇವೆಯನ್ನ ಪಡೆದ ವ್ಯಕ್ತಿಯು ಕಾರ್ಡ್ಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಕೇವಲ ತಮ್ಮ ಮೊಬೈಲ್ ಬಳಕೆ ಮಾಡಿ ಕ್ರೆಡಿಟ್ ಕಾರ್ಡಿನ ಉಪಯೋಗ ಪಡೆಯಬಹುದಾಗಿದೆ.
ಮೊಬೈಲ್ನಲ್ಲೇ ಗ್ರಾಹಕರು 2000 ರೂಪಾಯಿವರೆಗೆ ವ್ಯವಹಾರ ನಡೆಸಬಹುದು. 2 ಸಾವಿರ ರೂಪಾಯಿಗಿಂತ ಹೆಚ್ಚಿನ ಪಾವತಿಯಾಗಿ ಕಾರ್ಡ್ ಪಿನ್ನ್ನ ಟರ್ಮಿನಲ್ನಲ್ಲಿ ನಮೂದಿಸಿದ್ರೆ ಸಾಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.