ಇತ್ತೀಚಿನ ದಿನಗಳಲ್ಲಿ ಹೈ-ಪ್ರೊಫೈಲ್ ವಿಚಾರಗಳಿಂದಲೇ ಭಾರೀ ಸುದ್ದಿಯಾಗಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹೊಸ ಯತ್ನವೊಂದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನೆಟ್ಫ್ಲಿಕ್ಸ್ನ ಹೋಂ ಸ್ಕ್ರೀನ್ ಒಂದನ್ನು ತನ್ನ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಮುಂಬೈ ಪೊಲೀಸ್, ಮಾಸ್ಕ್ ಅನ್ನು ಸರಿಯಾಗಿ ಹಾಕಿಕೊಳ್ಳುವುದು ಹೇಗೆಂದು ತೋರಿದೆ.
“ವೈರಸ್ನೊಂದಿಗೆ ನಿಮ್ಮ ಸ್ಕ್ರೀನ್ ಅನ್ನು ಶೇರ್ ಮಾಡಿಕೊಳ್ಳಬೇಡಿ. ನಾವೆಲ್ಲಾ ಸೇರಿಕೊಂಡು ಸರಿಯಾಗಿ ಮಾಸ್ಕ್ ಹಾಕಿಕೊಂಡು ಚಿಲ್ ಮಾಡೋಣ” ಎಂದು ಮುಂಬೈ ಪೊಲೀಸ್ ಪೋಸ್ಟ್ಗೆ ಹಾಕಿದ ಕ್ಯಾಪ್ಷನ್ನಲ್ಲಿ ಹೇಳಿಕೊಂಡಿದೆ.
ಇದೇ ವೇಳೆ, ಖುದ್ದು ಪೊಲೀಸರೇ ಮಾಸ್ಕ್ ಹಾಕಿಕೊಳ್ಳದೇ ಇರುವಾಗ ಜನರನ್ನು ಅಡ್ಡಗಟ್ಟಿ ದಂಡ ಕೇಳುತ್ತಿರುವುದು ಯಾವ ನ್ಯಾಯ ಎಂಬರ್ಥದ ಕಾಮೆಂಟ್ಗಳೆಲ್ಲಾ ಸಾಕಷ್ಟು ಬರುತ್ತಿವೆ.
https://www.instagram.com/p/CH9YTZVF5Zv/?utm_source=ig_web_copy_link