ಅಂತಾರಾಷ್ಟ್ರೀಯ ವಿಮಾನ ಪ್ರಯಾಣವು ಮುಂದಿನ ವರ್ಷ ಪ್ರಯಾಣಿಕರಿಗೆ ಹೊಸ ನಿಯಮಗಳನ್ನ ವಿಧಿಸುವ ಸಾಧ್ಯತೆ ಇದೆ. ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರು ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿರಬೇಕು ಎಂಬ ನಿಯಮವನ್ನ ವಿಧಿಸುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಲಸಿಕೆ ಒಮ್ಮೆ ಜನರ ಬಳಕೆಗೆ ಮುಕ್ತವಾದರೆ ಆಸ್ಟ್ರೇಲಿಯಾದಿಂದ ಪ್ರಯಾಣ ಬೆಳೆಸುವವರು ಹಾಗೂ ಬಂದಿಳಿಯುವವರಿಗೆ ಲಸಿಕೆ ಬಳಕೆ ಕಡ್ಡಾಯವಾಗಿರಲಿದೆ ಅಂತಾ ವಿಮಾನಯಾನ ಮುಖ್ಯಸ್ಥರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಪ್ರಯಾಣಿಕರಿಗೆ ವಿಮಾನಯಾನದ ನಿಯಮ ಹಾಗೂ ಷರತ್ತುಗಳಲ್ಲಿ ಕೆಲ ಬದಲಾವಣೆ ತರಲಿದ್ದೇವೆ. ಏರ್ಕ್ರಾಫ್ಟ್ ಮಾಡುವ ವೇಳೆ ಅವರು ಕೊರೊನಾ ಲಸಿಕೆ ಪಡೆದಿದ್ದಾರಾ ಸೇರಿದಂತೆ ಇನ್ನೂ ಹಲವು ಹೊಸ ನಿಯಮಗಳನ್ನ ರೂಪಿಸಲಿದ್ದೇವೆ ಅಂತಾ ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಮುಖ್ಯಸ್ಥ ಹೇಳಿದರು.