ಕೊರೊನಾ ವೈರಸ್ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ ಹಂತಕ್ಕೆ ಬಂದಿರುವ ವಿಚಾರ ನಿಟ್ಟುಸಿರು ಬಿಡುವಂತೆ ಮಾಡುತ್ತಿದೆ.
ಇದುವರೆಗೂ ಕೋವಿಡ್-19ಗೆ ಕಂಡುಹಿಡಿದಿರುವ ಲಸಿಕೆಗಳ ಪೈಕಿ ಯಾವೊಂದೂ ಸಹ 100% ಯಶಸ್ವಿಯಾಗದ ಇರುವ ಕಾರಣ ಜನರಲ್ಲಿ ಈ ಬಗ್ಗೆ ಇನ್ನೂ ಆತಂಕ ನಿವಾರಣೆ ಆಗಿಲ್ಲ. ಇದೇ ಆತಂಕವನ್ನು ಲಾಭಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು ದುಡ್ಡು ಮಾಡಲು ನಾನಾ ಮಾರ್ಗಗಳನ್ನು ಹುಡುಕಿಕೊಂಡಿವೆ.
ಅಮೆರಿಕದ ಮಾರುಕಟ್ಟೆಗೆ ಕೋವಿಡ್-19 ಲಸಿಕೆ ಪರಿಚಯವಾಗುತ್ತಲೇ, ತ್ವರಿತವಾಗಿ ಈ ಲಸಿಕೆ ಹಾಕಿಸಿಕೊಳ್ಳಲು ಮುಂಬಯಿಯಿಂದ ನ್ಯೂಯಾರ್ಕ್ಗೆ ಮೂರು ದಿನಗಳು ಹಾಗೂ ನಾಲ್ಕು ರಾತ್ರಿಗಳ ಟೂರ್ ಪ್ಯಾಕೇಜ್ ಮಾಡುವುದಾಗಿಯೂ, ಇದಕ್ಕೆ 1,74,999 ರೂಗಳು ಖರ್ಚಾಗುವುದಾಗಿಯೂ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶವನ್ನು ಎಡಲ್ವೀಸ್ ಮ್ಯೂಚುವಲ್ ಫಂಡ್ಸ್ನ ಸಿಇಓ ರಾಧಿಕಾ ಗುಪ್ತಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.