ಮಾದಕ ದ್ರವ್ಯ ಹಾಗೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆಡಿ ಲಕ್ಸುರಿ ಕಾರನ್ನು ಮನೆಯೊಂದರೊಳಗೆ ನುಗ್ಗಿಸಿದ್ದಾನೆ. ಈ ಅವಘಡದಲ್ಲಿ ಮನೆಯ ಮುಂಬಾಗಿಲು ಆತನ ಕಾರಿನ ವಿಂಡ್ಶೀಲ್ಡ್ಗೆ ತಗುಲಿ ಹಾಕಿಕೊಂಡಿದೆ.
ಈ ಅಪಘಾತದ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೆಸ್ಟ್ ಯಾರ್ಕ್ಶೈರ್ನ ಡ್ಯೂಸ್ಬರ್ರಿ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಕಾರಿನ ವಿಂಡ್ಶೀಲ್ಡ್ಗೆ ಬಾಗಿಲು ತಗಲಾಕಿಕೊಂಡಿದ್ದರೂ ಸಹ ಅಮಲಿನಲ್ಲಿದ್ದ ಚಾಲಕ ಅದನ್ನು ಸಾಕಷ್ಟು ಮುಂದಕ್ಕೆ ಓಡಿಸಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ 18 ವರ್ಷ ವಯಸ್ಸಿನವನಾಗಿದ್ದಾನೆ. ಮನೆ ಬಾಗಿಲಿಗೆ ಗುದ್ದುವ ಕೆಲ ಹೊತ್ತಿನ ಮುನ್ನ ಮತ್ತೊಂದು ಕಾರಿಗೆ ತನ್ನ ವಾಹನವನ್ನು ಗುದ್ದಿದ್ದಾನೆ ಈ ಟೀನೇಜರ್. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿದ ಆಪಾದನೆ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.