ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಈ ತಿಂಗಳ ಮೊದಲ ವಾರ ಪಶ್ಚಿಮ ಬಂಗಾಳದ ಪ್ರವಾಸ ನಡೆಸಿದ್ದರು. ಇದೇ ವೇಳೆ ಅವರು ದಲಿತ ಕುಟುಂಬದೊಂದಿಗೆ ಕುಳಿತು ಊಟ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.
ಈ ವಿಚಾರವಾಗಿ ಟೀಕೆ ಮಾಡಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮಿತ್ ಶಾ ದಲಿತ ಕುಟುಂಬದೊಂದಿಗೆ ಊಟ ಮಾಡಿದರು. ಆದರೆ ಬ್ರಾಹ್ಮಣ ಅಡುಗೆಯವರಿಂದ ತಯಾರಿಸಿದ ಊಟ ಮಾಡಿದರು ಎಂದು ಲೇವಡಿ ಮಾಡಿದ್ದಾರೆ.
ಅಮಿತ್ ಶಾ ರಾಜ್ಯ ಪ್ರವಾಸ ಒಂದು ಶೋ ಆಫ್ ಎಂದು ಮಮತಾ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ಬುಡಕಟ್ಟು ಸ್ವತಂತ್ರ ಹೋರಾಟಗಾರ ಬಿರ್ಸಾ ಮುಂಡಾ ಪ್ರತಿಮೆ ಎಂದು ಬೇರೆ ಪ್ರತಿಮೆಗೆ ಬಿಜೆಪಿಯವರು ಮಾಲಾರ್ಪಣೆ ಮಾಡಿದ್ದಾರೆ ಎಂದು ಟೀಕಿಸಿದರು.
ದಲಿತ ಕುಟುಂಬದ ಜೊತೆ ಊಟ ಮಾಡಿದರು. ದಲಿತ ಕುಟುಂಬವು ಊಟ ತಯಾರಿಸುವಾಗ ಎಲೆಕೋಸು ಮತ್ತು ಕೊತ್ತಂಬರಿಯನ್ನು ಕತ್ತರಿಸುವ ದೃಶ್ಯಗಳು ಇದ್ದವು. ಆದರೆ ಅಮಿತ್ ಶಾ ತಟ್ಟೆಯಲ್ಲಿ ಬಾಸ್ಮತಿ ಅನ್ನ, ಪೋಸ್ತಾ ಬೋರಾ ಇತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.