ತಳ್ಳೋ ಮಾಡೆಲ್ ಗಾಡಿಯಾದ ಪಾಕಿಸ್ತಾನದ ಐಷಾರಾಮಿ ಬಸ್…! 23-11-2020 11:26AM IST / No Comments / Posted In: Latest News, International ಪಾಕಿಸ್ತಾನದ ಐಶಾರಾಮಿ ಪೇಶಾವರ್ ಬಸ್ ರ್ಯಾಪಿಡ್ ಟ್ರಾನ್ಸಿಟ್ ಮಾರ್ಗ ಮಧ್ಯೆಯೇ ಹಾಳಾಗಿದ್ದು ಬಸ್ ಒಳಗಿದ್ದ ಪ್ರಯಾಣಿಕರೆಲ್ಲ ಸೇರಿ ಬಸ್ನ್ನ ದೂಡುವಂತಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೊಳಗಾಗಿದೆ. ಅದ್ಬಾರಾ ನಿಲ್ದಾಣ ಸಮೀಪದ ಮುಖ್ಯ ಕಾರಿಡಾರ್ನಲ್ಲಿ ಬಸ್ ಹಾಳಾಗಿದ್ದು ಪ್ರಯಾಣಿಕರೆಲ್ಲ ಸೇರಿ ಬಸ್ನ್ನ ದೂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಟ್ರಾನ್ಸ್ ಪೇಶಾವರ್ ವಕ್ತಾರ, ಬಸ್ನಲ್ಲಿ ಉಂಟಾದ ಚಿಕ್ಕ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಎಲ್ಲ ನಿಲ್ದಾಣಗಳಲ್ಲಿ ಇಂಜಿನಿಯರ್ಗಳು ಇರುತ್ತಾರೆ. ಅಲ್ಲದೇ ತುರ್ತು ಪರಿಸ್ಥಿತಿಗೆಂದೇ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚುವರಿ ಬಸ್ಗಳನ್ನ ಇಡಲಾಗಿದೆ ಅಂತಾ ಹೇಳಿದ್ರು. ಅಂದಹಾಗೆ ಈ ಹೈಟೆಕ್ ಬಸ್ ಈ ಹಿಂದೆಯೂ ಅಪಘಾತ ಹಾಗೂ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಸುದ್ದಿ ಮಾಡಿತ್ತು. BRT Peshawar getting local help pic.twitter.com/H7w8XfVV5J — Murtaza Ali Shah (@MurtazaViews) November 20, 2020 Residents pay their tribute to the amazing services of BRT by giving ride to one of it's busses 🖤 Peshawar 2020 pic.twitter.com/fze9LBwV2r — History Of Pakistan (@OldPakHistory) November 20, 2020