ಮುಂಬೈ: ಪ್ರಚಾರಕ್ಕಾಗಿ ಸೆಲೆಬ್ರಿಟಿಗಳು ಏನೆಲ್ಲ ವೇಷ, ಅವತಾರಗಳನ್ನು ತಾಳುತ್ತಾರೆ ನೋಡಿ. ಬಿಗ್ ಬಾಸ್ ಸ್ಪರ್ಧಿ, ನಟಿ, ಗಾಯಕಿ ಜಸ್ಲೀನ್ ಮಾಥಾರೂ ವಧುವಿನಂತೆ ಅಲಂಕರಿಸಿಕೊಂಡು, ಅರ್ಧ ಲೆಹಂಗಾ ಕೆಳಗಡೆ ಶಾರ್ಟ್ಸ್ ಧರಿಸಿ ರಸ್ತೆಯಲ್ಲಿ ನಡೆದು ಬಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಜಸ್ಲೀನ್ ತಮ್ಮ ಹೊಸ ಅವತಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ಲೆಹಂಗಾ – ಶಾರ್ಟ್ಸ್ ತೊಟ್ಟು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ವಧುವಿನಂತೆಯೇ ಅಲಂಕರಿಸಿಕೊಂಡು ಕೆಂಪು ಬಣ್ಣದ ಲೆಹಂಗಾ ಟಾಪ್, ದುಪ್ಪಟ್ಟಾ ಹಾಗೂ ಜೀನ್ಸ್ ಶಾರ್ಟ್ಸ್ ಧರಿಸಿ ತಾನು ಅತ್ತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಜಸ್ಲೀನ್ ಹೊಸ ಅವತಾರಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ಸಂಸ್ಕೃತಿಗೆ ಧಕ್ಕೆಯುಂಟುಮಾಡಿದ್ದಾರೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಜಸ್ಲೀನ್ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಜಸ್ಲೀನ್ ಬಿಗ್ ಬಾಸ್ ಸೀಜನ್ 12ರಲ್ಲಿ ಸ್ಪರ್ಧಿಸಿದ್ದರು.