ಮದುವೆಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ವರನೊಬ್ಬ ತನ್ನ ಭಾವಿ ಪತ್ನಿಯ ಗೆಳೆಯನನ್ನ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೃತನ ದೇಹವನ್ನ ಸೂಟ್ಕೇಸ್ನಲ್ಲಿ ತುಂಬಿ ಗುಜರಾತ್ ರಾಜ್ಯದ ಭರೂಚ್ನಲ್ಲಿ ಎಸೆಯಲಾಗಿತ್ತು ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.
46 ವರ್ಷದ ನೀರಜ್ ಗುಪ್ತಾ ಎಂಬ ಉದ್ಯಮಿ ತನ್ನ ಕಂಪನಿಯಲ್ಲೇ ಕೆಲಸಕ್ಕಿದ್ದ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ನವೆಂಬರ್ 13ರಂದು ಮದುವೆ ವಿಚಾರವಾಗಿ ನೀರಜ್ ಗುಪ್ತಾ, ವರ ಜುಬರ್, ಫೈಸಲ್ ಹಾಗೂ ತಾಯಿ ಶಾಹೀನ್ ನಾಜ್ ಜೊತೆ ಜಗಳ ಏರ್ಪಡಿತ್ತು.
ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ನಿಶ್ಚಿತ ವರ, ಉದ್ಯಮಿ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಹಾಗೂ ಹೊಟ್ಟೆಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ. ಬಳಿಕ ಆತನ ಶವವನ್ನ ಸೂಟ್ಕೇಸ್ನಲ್ಲಿ ತುಂಬಿ ಎಸೆಯಲಾಗಿತ್ತು. ಗುಪ್ತಾ ಪತ್ನಿ ನೀಡಿದ ದೂರನ್ನ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.